ರಿಪ್ಪನ್‌ಪೇಟೆ ; 12ನೇ ಶತಮಾನದಲ್ಲಿ ತಮ್ಮದೇ ವಚನಗಳ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಅಕ್ಕಮಹಾದೇವಿಯವರು ಹುಟ್ಟುಹಾಕಿದರು. ಮಹಿಳೆಯರಿಗೆ ಗೌರವದ ಸಂಕೇತವಾಗಿ ಕೊಟ್ಟ ಶಕ್ತಿ ಎಂದರೆ ಅದು ಅಕ್ಕಮಹಾದೇವಿ ಅವರ ವಚನಗಳ ಅರಿವು ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗಲು ಪ್ರೇರಣೆಯಾಗಿವೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಕೋಟೆತಾರಿಗ ಸಿ.ಆರ್.ಪಿ. ಸಂತೋಷ್ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾದ ‘ಹಳ್ಳಿಮಕ್ಕಳ ರಂಗ ಹಬ್ಬ’ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ದಿನದೊಂದು ಉಡುತಡಿ ಅಕ್ಕಮಹಾದೇವಿಯವರು ರಚಿಸಿರುವ ವಚನಗಳು ವ್ಯಕ್ತಿಯನ್ನು ಚಿಂತನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೆಪಿಸುತ್ತವೆ. ಮುಖ್ಯವಾಗಿ ಬದುಕನ್ನು ಸಾರ್ಥಕಗೊಳಿಸುವಂತೆ ಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆಂದರು.

ರಂಗ ನಿರ್ದೇಶಕ ಡಾ.ಗಣೇಶ ಕೆಂಚನಾಲ ಮಾತನಾಡಿ, ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ ಚನ್ನಮಲ್ಲಿಕಾರ್ಜುನನ್ನು ತನ್ನ ಪತಿಯೆಂದು ಸ್ವೀಕರಿಸಿ ಲೌಕಿಕ ಜಗತ್ತನ್ನು ಧಿಕ್ಕರಿಸಿ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ದಿಟ್ಟ ಮಹಿಳೆ ಅಕ್ಕಮಹಾದೇವಿಯೆಂದು ಹೇಳಿ ಮಕ್ಕಳ ಬೇಸಿಗೆ ರಜೆಯಲ್ಲಿ ಇಂತಹ ಶಿಬಿರಗಳ ಮೂಲಕ ತಮ್ಮ ಜ್ಞಾನಾಭಿವೃದ್ದಿಗೆ ಶಿಬಿರಗಳಲ್ಲಿ ಭಾಗವಹಿಸುವಂತೆ ಪೋಷಕವರ್ಗಕ್ಕೆ ಸಲಹೆ ನೀಡಿದರು. ರಾಮಯಾಣ ಮಹಾಭಾರತದಂತೆ ಅಕ್ಕಮಹಾದೇವಿ ಬಸವಣ್ಣ ಇನ್ನಿತರ ದಾಸರ ತತ್ವಪದಗಳನ್ನು ಮಕ್ಕಳಲ್ಲಿ ತುಂಬಿ ಜಾಗೃತಗೊಲಿಸುವಂತಾಗಬೇಕು ಎಂದು ಹೇಳಿದರು.

ಬಿ.ಎಸ್.ಎನ್.ಎಲ್. ಶ್ರೀಧರ, ರೈತ ಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ, ದೀಪಾ ಗಣೇಶ, ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಭದ್ರಾವತಿಯ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮಿ ಎಸ್.ಇವರಿಂದ ಏಕ ವ್ಯಕ್ತಿ ರಂಗಕಲೆಯನ್ನು ಅಭಿನಯಿಸುವ ಮೂಲಕ ಶಿಬಿರದ ಮಕ್ಕಳನ್ನು ಆಕರ್ಷಿಸುವಂತೆ ಮಾಡಿತು.
ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ರಿಪ್ಪನ್‌ಪೇಟೆ ; ಭಾರತದ ಮಹಾನ್ ಚೇತನ.ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ, ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜಯಂತ್ಯುತ್ಸವವನ್ನು ವಿನಾಯಕ ವೃತ್ತದಲ್ಲಿ ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.
ಗ್ರಾಮ ಪಂಚಾಯಿತ್ ಸದಸ್ಯ ಪ್ರಕಾಶ್ ಪಾಲೇಕರ್ ಮಾತನಾಡಿ, ಪ್ರಪಂಚದಲ್ಲಿ ಉತ್ತಮ ಸಂವಿಧಾನ ನಮ್ಮ ದೇಶದ್ದಾಗಿದೆ. ಸಂವಿಧಾನ ಬದುಕುವ ಹಕ್ಕುಯನ್ನು ಡಾ|| ಬಿ.ಆರ್.ಅಂಬೇಡ್ಕರ್ ರಚಿಸಿ ನೀಡಿದ್ದಾರೆ. ಅವರ ಆದರ್ಶಗಳು ನಮ್ಮ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯ ಆರ್.ವಿ.ನಿರೂಪ್‌ಕುಮಾರ್ ಮಾತನಾಡಿ, ಭಾರತ ದೇಶದ ಅಪ್ರತಿಮ ಹೋರಾಟಗಾರ ಪ್ರಗತಿಪರ ಚಿಂತಕ ಸಮಾಜ ಸುಧಾರಕ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಡಾ|| ಬಿ.ಆರ್.ಅಂಬೇಡ್ಕರ್‌ವರು ಭಾರತೀಯ ಸಮಾಜದ ಕೆಳಸ್ತರದಿಂದ ಬಂದು
ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲ ಹೋರಾಟ ಮಾಡಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದ ದಿಟ್ಟ ನಾಯಕರಾಗಿರುವ ಅವರು ಎಲ್ಲರಿಗೂ ಆದರ್ಶಪ್ರಾಯರಾದವರು.
ಇನ್ನೋರ್ವ ಗ್ರಾಮ ಪಂಚಾಯಿತ್ ಸದಸ್ಯ ಅಶೀಫ್ ಭಾಷಾ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೋಜಪ್ಪ ಮಾಸ್ತರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಇಸಿಓ ಕರಿಬಸಪ್ಪ, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಈಶ್ವರಶೆಟ್ಟಿ ಹಲವರು ಪಾಲ್ಗೊಂಡಿದ್ದರು.