ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಶೂ ಭಾಗ್ಯ ಅನುದಾನ ಅಪೂರ್ಣ !

Written by Mahesha Hindlemane

Published on:

ಹೊಸನಗರ ; ತಾಲ್ಲೂಕಿನಲ್ಲಿ 207 ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಇದರ ಜೊತೆಗೆ 19 ಸರ್ಕಾರಿ ಪ್ರೌಢ ಶಾಲೆಗಳಿವೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ಶೂ ಭಾಗ್ಯ ಯೋಜನೆ ಕುಂಠಿತಗೊಂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, 2025-26ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಹೊಸನಗರದ ಕೆಲವು ಶಾಲೆಗಳಿಗೆ ಇನ್ನೂ ಶೂ ಭಾಗ್ಯ ಸರ್ಕಾರ ಕರುಣಿಸಿಲ್ಲ. ಕೆಲವು ಶಾಲೆಗಳಲ್ಲಿ ಅರ್ಧಂಬರ್ಧ ಶೂ ಭಾಗ್ಯಕ್ಕಾಗಿ ಹಣ ಹಾಕಲಾಗಿದೆ ಎಂದು ಹೇಳಲಾಗಿದೆ.

ಅರ್ಧಂಬರ್ಧ ಕತೆಯೇನು?

ಒಂದು ಶಾಲೆಯಲ್ಲಿ 20 ಮಕ್ಕಳಿದ್ದರೇ 10 ಮಕ್ಕಳಿಗಾಗುವಷ್ಟು ಶೂಗಾಗಿ ಹಣ ಹಾಕಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರುಗಳು 20 ಮಕ್ಕಳಲ್ಲಿ 10 ಮಕ್ಕಳಿಗೆ ಶೂ ಭಾಗ್ಯ ಕರುಣಿಸಿದರೆ ಉಳಿದ ಮಕ್ಕಳಿಗೆ ಬೇಸರವಾಗುತ್ತದೆ. ನಾವೇ ತಾರತಮ್ಯ ಮಾಡಿದ್ದಾಂತಾಗುತ್ತದೆ ಎಂದು ತಿಳಿದು ತಮ್ಮ ಸ್ವಂತ ಹಣದಿಂದ 20 ಮಕ್ಕಳಿಗೂ ಶೂ ಭಾಗ್ಯ ಕರುಣಿಸಿದ್ದಾರೆ. ಆದರೆ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಉಳಿದ 10 ಶೂ ಹಣ ಇನ್ನೂ ಹಾಕಿಲ್ಲ. ಕೆಲವು ಶಾಲೆಗಳಲ್ಲಿ ಶೂ ಬಾಬ್ತು ಅಷ್ಟು ಹಣ ಬಂದ ಮೇಲೆ ವಿದ್ಯಾರ್ಥಿಗಳಿಗೆ ಶೂ ನೀಡೋಣ ಎಂದು ಹಾಗೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು ಇದರಿಂದ ಈ ಸಾಲಿನ ವಿದ್ಯಾರ್ಥಿಗಳು ಶೂ ಭಾಗ್ಯದಿಂದ ವಂಚಿತರಾಗಲಿದ್ದಾರೆ ಎಂದು ಹೇಳಲಾಗಿದ್ದು ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೂ ಶೂಗೆ ನೀಡಿರುವ ಹಣ ವಂಚನೆಯಾಗಲಿದೆ ಎಂದು ಹೇಳಲಾಗಿದೆ.

ರಾಜ್ಯದ ಎಲ್ಲಾ ಕಡೆ ಅರ್ಧಂಬರ್ಧ ಅನುದಾನ ನೀಡಲಾಗಿದೆಯೇ?

ಇದು ಹೊಸನಗರ ತಾಲ್ಲೂಕಿಗೆ ಸಮೀತವಾಗಿರದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಿಗೂ ಶೂ ಭಾಗ್ಯಕ್ಕಾಗಿ ಅರ್ಧಂಬರ್ಧ ಹಣವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು ಇದರ ಬಗ್ಗೆ ಸರ್ಕಾರ ಸೂಕ್ತ ಗಮನ ಹರಿಸಬೇಕಾಗಿದೆ.

ಶಿಕ್ಷಣ ಸಚಿವರಿಗೆ ಇದು ಗೊತ್ತಿಲ್ಲವೇ? ಅಥವಾ ಜಾಣ ಕುರುಡೆ?

ರಾಜ್ಯದಲ್ಲಿ ಶೂ ಭಾಗ್ಯಕ್ಕಾಗಿ ಅರ್ಧಂಬರ್ಧ ಹಣ ಎಲ್ಲ ಶಾಲೆಗಳಿಗೆ ನೀಡಲಾಗಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದೆ ಎಂದು ಶಿಕ್ಷಣ ಸಚಿವರ ಗಮನಕ್ಕೆ ಇಲ್ಲಿಯವರೆಗೂ ಯಾವುದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಅಧಿಕಾರಿಗಳು ಗಮನಕ್ಕೆ ತರಲಿಲ್ಲವೇ? ಅಥವಾ ತಂದಿದ್ದರೂ ಸಚಿವರು ಜಾಣ ನಡೆ ಅನುಸರಿಸುತ್ತಿದ್ದಾರೆಯೇ? ಸಚಿವರೇ ಉತ್ತರಿಸಬೇಕಾಗಿದೆ.

ವಿರೋಧ ಪಕ್ಷ ಎಲ್ಲಿ ಹೋಗಿದೆ ?

ರಾಜ್ಯದ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಗಮನಕ್ಕೆ ಬರಲಿಲ್ಲವೇ? ಬಂದರೂ ಹೊಂದಾಣಿಕೆ ರಾಜಕೀಯ ನಾಟಕವಾಡುತ್ತಿದೆಯೇ? ಎಂಬುದು ಜನರಿಗೆ ತಿಳಿಯಬೇಕಾಗಿದ್ದು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಕ್ಷಣ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಎಲ್ಲರಿಗೂ ಶೂ ಭಾಗ್ಯ ಕರುಣಿಸಲಿ ಜೊತೆಗೆ ಈಗಾಗಲೇ ಕೆಲವು ಶಾಲೆಗಳಲ್ಲಿ ಶಿಕ್ಷಕರು ಅಥವಾ ಎಸ್‌ಡಿಎಂಸಿಯವರು ಹಣ ನೀಡಿ ಶೂ ಖರೀದಿಸಿ ಮಕ್ಕಳಿಗೆ ಶೂ ನೀಡಿದಲ್ಲಿ ಅಂತಹ ಶಾಲೆಯ ಶಿಕ್ಷಕರಿಗೆ ಸದಸ್ಯರಿಗೆ ಸರ್ಕಾರ ಈ ಕೂಡಲೇ ಹಣ ಒದಾಗಿಸಲಿ.

Leave a Comment