ಹೊಸನಗರದಲ್ಲಿ ಶ್ರೀ ರಾಮ್ ಫೈನಾನ್ಸ್ ನೂತನ ಶಾಖೆ ಕಾರ್ಯಾರಂಭ | ಗ್ರಾಹಕರ ಸೇವೆಯೇ ಸಂಸ್ಥೆಗೆ ಶ್ರೀರಕ್ಷೆ ; ಶರಶ್ಚಂದ್ರ ಭಟ್

Written by Mahesha Hindlemane

Published on:

ಹೊಸನಗರ ; ಕಳೆದ 15 ವರ್ಷಗಳ ಹಿಂದೆ ಪಟ್ಟಣದಲ್ಲಿ ಸಂಸ್ಥೆಯ ಸಣ್ಣ ಗ್ರಾಮೀಣ ಕಚೇರಿ ಪ್ರಾರಂಭಗೊಂಡು ಸೇವೆ ಸಲ್ಲಿಸುತ್ತಿದ್ದು, ಇಂದು ಶಾಖಾ ಕಚೇರಿಯಾಗಿ ಹೊಸ ಕಟ್ಟಡಕ್ಕೆ ವರ್ಗಾವಣೆಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಸಂಸ್ಥೆಯ ಪ್ರಗತಿಗೆ ಸಹಕರಿಸಿದ ಸಿಬ್ಬಂದಿಗಳ ಕೊಡುಗೆ ಅನನ್ಯವಾದುದು ಎಂದು ಅವರ ಕಾರ್ಯವೈಖರಿ ಕುರಿತು ಸಂಸ್ಥೆಯ ಮಂಗಳೂರು ವಿಭಾಗದ ವಲಯ ವ್ಯವಹಾರಗಳ ಮುಖ್ಯಸ್ಥ ಶರಶ್ಚಂದ್ರ ಭಟ್ ಪ್ರಶಂಸೆ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಶಿವಮೊಗ್ಗ ರಸ್ತೆಯ ಶ್ರೀ ಸೀತಾರಾಮಚಂದ್ರ ಸಭಾಭವನದ ಪಕ್ಕದ ನೂತನ ಕಟ್ಟಡದಲ್ಲಿ ಬುಧವಾರ ಆರಂಭಗೊಂಡ ಶ್ರೀ ರಾಮ್ ಖಾಸಗಿ ಫೈನಾನ್ಸ್ ನೂತನ ಶಾಖಾ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು, ಹೊಸನಗರ ತಾಲೂಕಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಅವರೆಲ್ಲರ ಸಹಕಾರದಿಂದ ಸಂಸ್ಥೆಯು ಆರ್ಥಿಕವಾಗಿ ಸಬಲಗೊಂಡಿದೆ. ಗ್ರಾಹಕರ ಸೇವೆಯೇ ಸಂಸ್ಥೆಗೆ ಶ್ರೀ ರಕ್ಷೆಯಾಗಿದೆ. ಸಂಸ್ಥೆಯ ತ್ಯಾಗರಾಜನ್ ಅವರ ಆಶಯದಂತೆ ಕಳೆದ 25 ವರ್ಷಗಳಿಂದ ಸಂಸ್ಥೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತ ಬಂದಿದೆ. ಜಿಲ್ಲೆಯಲ್ಲಿ ಈ ಬಾರಿ 750 ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯಲಿದ್ದು, ತಾಲೂಕಿನ 35 ಪ್ರತಿಭಾವಂತ ಮಕ್ಕಳು ಸೇರಿದ್ದಾರೆ ಎಂದರು. ವಾಹನ ಸಾಲ, ವ್ಯವಹಾರ ಸಾಲ, ವೈಯಕ್ತಿಕ ಸಾಲಕ್ಕೆ ಸೀಮಿತವಾಗಿದ್ದ ಸಂಸ್ಥೆಯೂ ಪ್ರಸಕ್ತ ಸಾಲಿನಲ್ಲಿ ಚಿನ್ನದ ಮೇಲಿನ ಸಾಲ ಹಂಚಿಕೆಗೆ ಮುಂದಾಗಿದೆ. ಗ್ರಾಹಕರು ಸಂಸ್ಥೆಯ ವಿವಿಧ ಸಾಲಸೌಲಭ್ಯಗಳ ಸದುಪಯೋಗ ಪಡೆಯಲು ಅವರು ವಿನಂತಿಸಿದರು.

ಈ ವೇಳೆ ಝೋನಲ್ ಕಲೆಕ್ಷನ್ ಹೆಡ್ ಬಿ. ನಾಗರಾಜ್, ಝೋನಲ್ ಸೇಲ್ಸ್ ಹೆಡ್ ಸದಾಶಿವ ಪೂಜಾರಿ, ರಿಜನಲ್ ಬಿಝೆನೆಸ್ಸ್ ಹೆಡ್ ಜಾರ್ಜ್ ಡಿ’ಸೋಜಾ, ರೀಜನಲ್ ಕಲೆಕ್ಷೆನ್ ಹೆಡ್ ಯೋಗಿಶ್ ಎಂ.ಆರ್, ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಸೇರಿದಂತೆ ವಿವಿಧ ಸಂಸ್ಥೆಗಳ ವಾಹನ ಡೀಲರ್‌ಗಳು ಹಾಗು ಸಂಸ್ಥೆಯ ಹಲವು ಸಿಬ್ಬಂದಿಗಳು ಇದ್ದರು.

ಇದೇ ಸಂದರ್ಭದಲ್ಲಿ ತಾಲೂಕಿನ ಸುಮಾರು 35 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 4 ಸಾವಿರ ರೂ. ವಿದ್ಯಾರ್ಥಿ ವೇತನದ ಚೆಕ್ ಜೊತೆಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

Leave a Comment