ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಯ ನಿವಾಸಿಯಾದ ಶೈಲಜಾ ಶಾನುಭೋಗ್ ಅವರು, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸೇವಾ ಸಮಿತಿ 59ನೇ ವರ್ಷದ ಗಣೇಶೋತ್ಸವದಲ್ಲಿ ಗಣೇಶನಿಗೆ ಸುಮಾರು ₹1.50 ಲಕ್ಷ ಮೌಲ್ಯದ 320 ಗ್ರಾಂ ತೂಕದ ಬೆಳ್ಳಿ ಹಾರವನ್ನು ಭಕ್ತಿಯಿಂದ ಅರ್ಪಿಸಿದ್ದಾರೆ.
ಪೂಜಾ ಕಾರ್ಯಕ್ರಮದ ಬಳಿಕ ಈ ಬೆಳ್ಳಿ ಹಾರಕ್ಕೆ ವಿಶೇಷ ವೈದಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ, ಗಣಪತಿಯ ಮೂರ್ತಿಗೆ ಧಾರಣೆ ಮಾಡಲಾಯಿತು. ನಂತರ ಮಹಾಮಂಗಳಾರತಿ ಜರುಗಿಸಿ, ನೆರೆದಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶೈಲಜಾ, ತಮ್ಮ ಮನಸೋ ಇಚ್ಛೆಯ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಗಣೇಶನಿಗೆ ನೀಡಿದ್ದ ಹರಕೆಯನ್ನು ಈ ರೀತಿ ಸಲ್ಲಿಸಿರುವುದಾಗಿ ಹಂಚಿಕೊಂಡರು.
ಕೊಡುಗೆ ನೀಡಿದ ದಾನಿ ಶೈಲಜಾ ಶಾನಭೋಗ್ ಅವರನ್ನು ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಕಾರ್ಯದರ್ಶಿ ಆರ್.ಎಂ. ನವೀನ್ ಸೇರಿದಂತೆ ಪದಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಂ.ಬಿ. ಮಂಜುನಾಥ, ಎಂ. ಸುರೇಶ್ ಸಿಂಗ್, ವೀರಭದ್ರಪ್ಪಗೌಡ, ಪದ್ಮಾ ಸುರೇಶ್, ರೇಖಾ ರವಿ, ಹೆಚ್.ಆರ್. ಅಶೋಕ, ಆರ್. ರಾಘವೇಂದ್ರ, ಯೋಗೇಶ್, ತೀರ್ಥೇಶ್, ಹೆಚ್.ಎನ್. ಚೋಳರಾಜ್, ನಾಗರಾಜ ಕೆದಲುಗುಡ್ಡೆ, ಡಿ.ಈ. ರವಿಭೂಷಣ, ಮಂಜುನಾಥ ಗವಟೂರು, ರಾಮಚಂದ್ರ ಬಳೆಗಾರ್, ಮುರುಳಿ ಕೆರೆಹಳ್ಳಿ, ಚಂದ್ರ ಸಿದ್ದಪ್ಪನಗುಡಿ, ಚಿಪ್ಪಳಿ ರಾಘವೇಂದ್ರ, ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ್ ಆಚಾರ್, ರಾಜೇಶ್, ನಾಗರಾಜ್ ಪವಾರ್, ಸುಹಾಸ್, ವೈ.ಜೆ. ಕೃಷ್ಣ, ಬೇಕರಿ ನಾರಾಯಣ್, ಆರ್.ಈ. ಭಾಸ್ಕರ್ ಶೆಟ್ಟಿ, ಸಂದೀಪ್, ಪಿ. ಸುಧೀರ್ ಹಾಗೂ ಸೇವಾ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

