ರಿಪ್ಪನ್‌ಪೇಟೆಯಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ; ಸಾಮಾಜಿಕ ಅರಣ್ಯ ಯೋಜನೆಯಡಿ ನಿರ್ವಹಿಸಲಾದ ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪಣೆ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ನರೇಗಾ ಯೋಜನೆಯಡಿ 2024 ಏಪ್ರಿಲ್‌ನಿಂದ 2025 ಮಾರ್ಚ್ ಅಂತ್ಯದವರೆಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ನಿರ್ವಹಿಸಲಾದ ಕಾಮಗಾರಿಗಳ ವೆಚ್ಚದ ವಿವರವನ್ನು ಚರ್ಚಿಸುವಾಗ ಸಾಕಷ್ಟು ವಿರೋಧಗಳು ವ್ಯಕ್ತಗೊಂಡು ಗ್ರಾಮ ಸಭೆಗೆ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಾಗದೆ ಬೇಕಾಬಿಟ್ಟಿಯಾಗಿ ಜನಪ್ರತಿನಿಧಿಗಳ ಗಮನಕ್ಕೂ ತರದೇ ಕಾಮಗಾರಿ ಮಾಡಲಾಗಿದೆ ಈ ಬಗ್ಗೆ ನಮ್ಮ ಆಕ್ಷೇಪಣೆಯಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಆರ್.ವಿ.ನಿರೂಪ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಸಾರ್ವಜನಿಕರು ಧ್ವನಿಗೂಡಿಸಿ ತಕ್ಷಣ ಈಗಾಗಲೇ ನಿರ್ವಹಿಸಲಾಗಿರುವ ಕಾಮಗಾರಿಯ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಸರ್ಕಾರ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಗ್ರಾಮ ಪಂಚಾಯ್ತಿಯ ಪಂಚವಾರ್ಷಿಕ ಯೋಜನೆಯಡಿ ಗ್ರಾಮಾಭಿವೃದ್ದಿ ಯೋಜನೆಗೆ ಕ್ರಿಯಾಯೋಜನೆ ತಯಾರಿಸುವ ಕಾರ್ಯವನ್ನು ಅನುಷ್ಟಾನಗೊಳಿಸಿತು. ಇದರಿಂದ ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಎಲ್ಲಿ ಯಾವ ಭಾಗದಲ್ಲಿ ಕಾರ್ಯನಿರ್ವಹಿಸಲಾಗಿದೆ ಎಂಬ ಕುರಿತು ಮಾಹಿತಿ ಇರುವುದಿಲ್ಲ ಇದರಿಂದ ಗ್ರಾಮ ಪಂಚಾಯಿತ್‌ಗೆ ನಷ್ಟವಾಗುತ್ತದೆಂಬ ಕಾರಣದಿಂದ ಪ್ರತಿ ವರ್ಷದ ಗ್ರಾಮ ಸಭೆಯಲ್ಲಿ ಅಭಿವೃದ್ದಿ ಕಾಮಗಾರಿ ನಿರ್ವಹಿಸಲು ಕ್ರಿಯಾಯೋಜನೆಯ ಪಟ್ಟಿ ಸಿದ್ದಪಡಿಸಿ ಜಾರಿಗೊಳಿಸಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಅಧಿಕಾರಿ ವರ್ಗ ಕೆಲಸ ಮಾಡುತ್ತಿದ್ದಾರೆಂದು ಗ್ರಾಮ ಪಂಚಾಯಿತ್ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಸಭೆಯ ಗಮಸೆಳೆದರು.

ಇದೇ ಸಂದರ್ಭದಲ್ಲಿ ಕೆಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರನ ಮತ್ತು ಇಂಜಿನಿಯರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸಹ ಸಭೆಯಲ್ಲಿ ನಿರ್ಣಯಿಸಲು.

ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ ಇಂದು ಆಯೋಜಿಸಲಾದ 2025-26ನೇ ಸಾಲಿನ ಪ್ರಥಮ ಹಂತದ 2024-25ನೇ ಸಾಲಿನ ಎಂ.ಜಿ.ಎನ್.ಆರ್.ಇ.ಜಿ.ಎ ಹಾಗೂ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯ ಹೊಸನಗರ ತಾಲ್ಲೂಕ್ ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕಿ ಕಲಾವತಿ ನೋಡಲ್ ಆಧಿಕಾರಿಯಾಗಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕರ ಆಕ್ಷೇಪಣೆಯನ್ನು ಮತ್ತು ಕೆಲವು ಇಲಾಖೆಯ ಕಾಮಗಾರಿಯಲ್ಲಿನ ಲೋಪದೋಷಗಳ ಬಗ್ಗೆ ಸಾರ್ವಜನಿಕರ ದೂರುಗಳ ನಿರ್ಣಾಯವನ್ನು ದಾಖಲಿಸಿ ಮೇಲಾಧಿಕಾರಿಗಳಿಗೆ ಕಳುಹಿಸುವುದಾಗಿ ಹೇಳಿದರು.

ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಆಸಿಫ್‌ಭಾಷಾ, ಆರ್.ಎಲ್.ನಿರೂಪ್ ಕುಮಾರ್, ಪ್ರಕಾಶ ಪಾಲೇಕರ್, ದೀಪಾ ಸುಧೀರ್, ನಿರುಪಮ ರಾಕೇಶ್, ವೇದಾವತಿ, ವನಮಾಲ, ಸುಂದರೇಶ್, ವಿನೋಧ, ದಾನಮ್ಮ,ಮಂಜುಳಾ, ಡಿ.ಈ. ಮಧುಸೂದನ್, ಸಾರಭಿ ಮತ್ತು ಪಿಡಿಓ ನಾಗರಾಜ್, ಕಾರ್ಯದರ್ಶಿ ಮಧುಶ್ರೀ, ಎನ್.ಆರ್.ಇ.ಜಿ. ಗಣಕ ಆಪರೇಟರ್ ಲಕ್ಷ್ಮಿ ಮತ್ತಿರರು ಇದ್ದರು.

Leave a Comment