ರಿಪ್ಪನ್‌ಪೇಟೆ ; ವರ್ಷಕೊಮ್ಮೆ ಬರುವ ಗೌರಿ ಹಬ್ಬಕ್ಕೆ ಬಾಗಿನ ನೀಡುವ ಕೆಲಸ ಪ್ರತಿಯೊಬ್ಬ ಸಹೋದರನು ಮಾಡಬೇಕು. ಬಾಗಿನ ಮುತ್ತೈದೆಯರ ಪ್ರತೀಕ. ಕರ್ತವ್ಯದ ಒತ್ತಡದಲ್ಲಿ ಮಹಿಳಾ ಪೊಲೀಸರು ಹಬ್ಬ ಹರಿದಿನಗಳಿಂದ ದೂರವಿರುವಂತಾಗಿದೆ. ಇದನ್ನರಿತ ಹುಂಚ ಸಾಮಾಜಿಕ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಕಳೆದ 13 ವರ್ಷದಿಂದ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಬಾಗಿನ ಮತ್ತು ಪೊಲೀಸ್ ಅಧಿಕಾರಿಗಳಿಗೆ ರಾಖಿ ಕಟ್ಟುವುದರೊಂದಿಗೆ ಸೋದರತ್ವವನ್ನು ಮೆರೆಯುತ್ತಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭಾನುವಾರದಂದು ಸಾಮಾಜಿಕ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಪೊಲೀಸ್ ಠಾಣೆಯಲ್ಲಿನ ಮಹಿಳಾ ಪೊಲೀಸರಿಗೆ ಅರಿಶಿಣ – ಕುಂಕುಮದ ತಿಲಕವನ್ನಿಟ್ಟು ಆರತಿ ಬೆಳಗಿ ಬಾಗಿನದ ಉಡಿ ತುಂಬಿ ಶುಭ ಹಾರೈಸಿದರೆ. ಪುರುಷರಿಗೆ ತಿಲಕವನ್ನಿಟ್ಟು ಆರತಿ ಬೆಳಗಿ ರಾಖಿಯನ್ನು ಕಟ್ಟಿ ಅಣ್ಣ-ತಂಗಿಯರ ಸಂಬಂಧ ಹೀಗೆ ಇರುವಂತಾಗಲಿ ಎಂದು ಶುಭ ಕೋರಿದರು.
ಪಿಎಸ್‌ಐ ರಾಜುರೆಡ್ಡಿ ಮಾತನಾಡಿ, ಇಂತಹ ಪುಣ್ಯದ ಕೆಲಸವನ್ನು ಮಾಡುವುದರೊಂದಿಗೆ ಪೊಲೀಸ್ ಇಲಾಖೆಯವರು ಜನಸ್ನೇಹಿಯಾಗಿ ಮಾಡಿರುವುದು ಹರ್ಷ ತಂದಿದೆ. ಇಲಾಖೆಯ ಕಾರ್ಯ ಒತ್ತಡದಲ್ಲಿ ಸಮಾಜದಲ್ಲೇ ಕೆಲ ಹೆಣ್ಣು ಮಕ್ಕಳಿಗೆ ಸಹೋದರರಿಲ್ಲದೆ ಬಾಗಿನ ಪಡೆಯುವುದೇ ನೋವು ಅನುಭವಿಸುತ್ತಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಸಹೋದರ ಇದ್ದರು ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆಂದು ವಿಷಾಧ ವ್ಯಕ್ತಪಡಿಸಿ, ಇವರಿಂದಲಾದರೂ ಕೂಡಾ ನಮ್ಮ ಸಂಪ್ರದಾಯ ಸಂಸ್ಕೃತಿ ಇನ್ನೊಬ್ಬರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಲ್ಲ ಪೊಲೀಸರಿಗೂ ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ರಾಖಿಯನ್ನು ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.
ವೃಷಭರಾಜ್‌ಜೈನ್, ಪ್ರವೀಣ್ ಕುಮಾರ್ ಮಂಡಕ, ಎಎಸ್‌ಐ ಹೆಚ್.ಸಿ. ಪೊಲೀಸ್ ಸಿಬ್ಬಂದಿವರ್ಗ ಹಾಗೂ ಹಿಂದೂ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.