ನಿಸ್ವಾರ್ಥ ಸೇವೆಯನ್ನು ಸಮಾಜ ಸಮಚಿತ್ತದಿಂದ ಸ್ವೀಕರಿಸಬೇಕು ; ಮಂಜುನಾಥ್ ಕೆ.ಆರ್.

Written by Mahesha Hindlemane

Published on:

ಹೊಸನಗರ ; ಸಮಾಜದಲ್ಲಿನ ಉಚಿತ ಸೇವಾ ಚಟುವಟಿಕೆಗಳನ್ನು ಸರ್ವರೂ ಮುಕ್ತವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ನಿಸ್ವಾರ್ಥ ಸೇವಾ ಕಾರ್ಯಗಳ ಮಹತ್ವ ಹೆಚ್ಚಾಗಲು ಸಾಧ್ಯ ಎಂದು ಹರಿದ್ರಾವತಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಕೆ.ಆರ್. ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಹಯೋಗದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆಯೋಜಿಸಿದ್ದ 14ನೇ ಉಚಿತ ನೇತ್ರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸೇವಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಬೇಕು ಎಂದರೆ ಜನರು ಸೇವೆಯ ಉಪಯುಕ್ತತೆ ಪಡೆಯಬೇಕು. ಇಂದು ಬಹಳಷ್ಟು ಸಂಘ ಸಂಸ್ಥೆಗಳು ಎಲೆ ಮರೆ ಕಾಯಿಗಳಂತೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಕಳೆದ 15 ವರ್ಷಗಳಲ್ಲಿ 14 ನೇತ್ರ ಶಿಬಿರ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವುದು ಸಂಸ್ಥೆಯ ಅನನ್ಯ ಸಾಧನೆ ಎಂದು ಅವರು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮಾರ್ಗದರ್ಶಕ, ನಿವೃತ್ತ ಸೇನಾನಿ ಕೆ. ಪಿ. ಕೃಷ್ಣಮೂರ್ತಿ, ಹಿರಿಯರಲ್ಲಿ ಕಣ್ಣಿನ ಜಾಗೃತಿ ಮತ್ತಷ್ಟು ಹೆಚ್ಚಬೇಕು. ಆಗ ಹಿರಿಯರು ಇನ್ನಸ್ಟು ಸ್ವಾಭಿಮಾನದ ಬದುಕು ಕಳೆಯಲು ಸಾಧ್ಯ. ಹಿರಿಯರು ಗೌರವಯುತವಾಗಿ ಬದುಕು ಸಾಗಿಸಲು ಕಣ್ಣು ಬಹಳ ಅಗತ್ಯ. ಕನಿಷ್ಟ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದರಿಂದ ಬೇರೆಯವರ ಮೇಲಿನ ಅವಲಂಬನೆ ತಪ್ಪುತ್ತದೆ. ಹೀಗಾಗಿ ಹಿರಿಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಂತ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಶಿಬಿರದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ, ವೈದ್ಯಾಧಿಕಾರಿಗಳಾದ ಡಾ.ಗೌತಮ್, ಡಾ. ಸಮ್ಯಕ್, ಡಾ. ದೀಕ್ಷಾ, ನೇತ್ರಾಧಿಕಾರಿ ಡಾ. ಕೃಷ್ಣರಾಜ್, ಗ್ರಾ. ಪಂ. ಸದಸ್ಯರಾದ ಪೂರ್ಣಿಮಾ ಲಕ್ಷ್ಮಣ್, ಸೀತಾ ಸಂತೋಷ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ರಾಘವೇಂದ್ರ, ಆರೋಗ್ಯಾಧಿಕಾರಿ ಸದಾಶಿವಪ್ಪ ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಪ್ರಭಾಕರ್ ಸ್ವಾಗತಿಸಿ, ವಂದಿಸಿದರು.

Leave a Comment