ಪ್ರತಿಭಾವಂತರನ್ನು ಸಮಾಜ ಗುರುತಿಸಬೇಕು : ಹೆಚ್ ಪಿ ಸುರೇಶ್

Written by Mahesha Hindlemane

Published on:

ರಿಪ್ಪನ್‌ಪೇಟೆ : ವಿದ್ಯಾರ್ಥಿ ದೆಸೆಯಲ್ಲಿ ಯಶಸ್ವಿ ಗಳಿಸಬೇಕಾದರೆ ಕಲಿಕೆಯಲ್ಲಿ ಶ್ರದ್ಧೆ, ಆಸಕ್ತಿ ಮೈಗೂಡಿಸಿಕೊಳ್ಳಲು ಅಂತಹ ವಿದ್ಯಾರ್ಥಿಗಳನ್ನು ಸಮಾಜದ ಗುರುತಿಸಬೇಕು ಎಂದು ರಿಪ್ಪನ್‌ಪೇಟೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ಹೆಚ್‌.ಪಿ ಸುರೇಶ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀರಾಮರ ಮಂದಿರದಲ್ಲಿ ಆಯೋಜಿಸಿದ್ದ ಇತ್ತೀಚಿಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಶುಭ ಆರ್ ರಾವ್ ಪ್ರತಿಭಾ ಪುರಸ್ಕಾರ ನೀಡಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತಿಕೆಗೆ ಕೊರತೆ ಇಲ್ಲ, ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕು, ಅಗತ್ಯಕ್ಕೆ ತಕ್ಕಂತೆ ನಿಯಮಿತ ಮೊಬೈಲ್ ಬಳಕೆ ಹಾಗೂ ಸೂಕ್ತ ಮಾರ್ಗದರ್ಶನವೇ ಯಶಸ್ಸಿನ ಗುಟ್ಟು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಆಸಕ್ತಿಗನುಗುಣವಾಗಿ ಕಲಿಕೆಗೆ ಪ್ರೋತ್ಸಾಹಿಸುವಂತೆ ಕಿವಿಮಾತು ಹೇಳಿದರು.

ಈ ಪವಿತ್ರ ವೇದಿಕೆಯಲ್ಲಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಹೊಸನಗರ ತಾಲೂಕಿನ ವಿದ್ಯಾರ್ಥಿಗಳಲ್ಲಿ 572 ಅಂಕಗಳನ್ನು ಪಡೆದು ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲು ನಮಗೆ ಸಿಕ್ಕಿರುವ ಅವಕಾಶವು ಅತ್ಯಂತ ಗೌರವದಾಯಕವಾಗಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಂಟಿ ಕಾರ್ಯದರ್ಶಿಯಾದ ಪದ್ಮ ಸುರೇಶ್ ಮಾತನಾಡಿ ಶುಭ. ಎಸ್. ರಾವ್ ರವರ ಪರಿಶ್ರಮ, ಸಮರ್ಪಣೆ ಹಾಗೂ ಓದಿನ ಮೇಲಿನ ತೀವ್ರ ಆಸಕ್ತಿಯು ಈ ದೊಡ್ಡ ಸಾಧನೆಗೆ ದಾರಿ ಮಾಡಿದೆ. ಇಂತಹ ಸಾಧಕರನ್ನು ಸನ್ಮಾನಿಸುವುದರ ಮೂಲಕ ನಾವು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸಹ ಪ್ರೇರಣೆಯ ಬೆಳಕು ಹೊತ್ತೊಯ್ಯುತ್ತೇವೆ.
ಅವರು ತಾವು ಪಡೆದ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಉಪಯೋಗಿಸಿ, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಬೆಳಗಲಿ ಎಂಬುದು ನಮ್ಮ ಹಾರೈಕೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಯು ಸಮಾಜದ ಆಸ್ತಿಯಾಗಿದ್ದು, ಅವರನ್ನು ಗುರುತಿಸಿ ಗೌರವಿಸುವ ಪರಿಪಾಠ ಬೆಳೆಸಿದಲ್ಲಿ ಮತ್ತೊಬ್ಬರಿಗೆ ಪ್ರೇರಣೆಯಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಪೋಷಕರರಾದ ಅಶ್ವತ್ ಎಸ್ ಹಾಗೂ ಶೋಭಾ ಎಸ್ ಇದ್ದರು.
ಸಮಾರಂಭದಲ್ಲಿ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಮಿತಾ ಬಲ್ಲಾಳ್, ಉಪಾಧ್ಯಕ್ಷ ಪುರಾಣಿಕ್, ಖಜಾಂಚಿ ಶಿವಾನಂದ ಉಪಾಧ್ಯಕ್ಷ ವಾಸುದೇವ ಮಂಗಳೂರು ಕರ್, ಸಹ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ಹಾಗೂ ಸೌಮ್ಯ ಅರುಣ್ ಕುಮಾರ್, ಮಾನಸ ಪುರುಷೋತ್ತಮ್, ಸುಜಾತಾ ಶಿವಾನಂದ, ವೀಣಾ ಪ್ರಭಾಕರ್, ಸರಸ್ವತಿ ಪ್ರೇಮಚಂದ್ರ ಮುಂತಾದವರು ಇದ್ದರು.

Leave a Comment