ರಿಪ್ಪನ್‌ಪೇಟೆ ; ಮಣ್ಣಿನ ಫಲವತ್ತತೆ ಮತ್ತು ಮಣ್ಣಿನ ಸಂರಕ್ಷಣೆ ಸೇರಿದಂತೆ ಮಣ್ಣನ್ನು ವಿಷ ಮುಕ್ತ ಮಾಡಲು ಸಹಜ ಕೃಷಿ ಮಾಡುವಂತೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ರೈತರಿಗೆ ಸಲಹೆ ನೀಡಿದರು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮಠದಲ್ಲಿ ಭೂ ಸುಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿ, ಕೃಷಿ ಭೂಮಿಯಲ್ಲಿ ಮಣ್ಣಿನಲ್ಲಿ ಪೌಷ್ಟಿಕಾಂಶದ ಕೊರತೆ ಬಗ್ಗೆ ಕೃಷಿ ತಜ್ಞರ ಸಲಹೆ ಪಡೆದು ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿಗೆ ಪೋಷಕಾಂಶವನ್ನು ಕೊಡುವ ಬಗ್ಗೆ ರೈತರು ಮುಂದಾಗಬೇಕು ಮತ್ತು ಮಣ್ಣು ಫಲವತ್ತಾದರೆ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವೆಂದ ಅವರು, ಹಸಿರಲೆ ಗೊಬ್ಬರ ಮತ್ತು ಜಾನುವಾರುಗಳ ಗೊಬ್ಬರವನ್ನು ಬಳಸುವುದು ಅತಿ ಮುಖ್ಯವಾಗಿದೆ. ಇತ್ತೀಚೆನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಯ ಸವಕಲು ಆಗುವುದೆಂದರು.
ಜಲ ತಜ್ಞ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿ, ನೀರಿನ ಮಿತ ಬಳಕೆ ಮಾಡುವಂತೆ ಮತ್ತು ಹೆಚ್ಚು ರಾಸಾಯನಿಕ ಗೊಬ್ಬರ ಹಾಕುವುದರಿಂದಾಗಿ ಬೆಳೆ ಹೆಚ್ಚು ಉತ್ಪಾದನೆಯಾಗುವುದೇ ಹೊರತು ಭೂಮಿಯಲ್ಲಿ ಉತ್ಪತ್ತಿಯಾಗುವ ಎರೆಹುಳುಗಳಿಗೆ ದುಷ್ಪರಿಣಾಮ ಉಂಟಾಗುವುದೆಂದ ಅವರು, ಹೆಚ್ಚು ಹೆಚ್ಚು ಸಾವಯವ ಗೊಬ್ಬರ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಾಗುವುದರೊಂದಿಗೆ ಬೆಳೆಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಹೇಳಿದರು.
ಜಿಲ್ಲಾ ಬೌದ್ದಿಕ ಪ್ರಮುಖ ವಸಂತ್, ತಾಲ್ಲೂಕು ಕಾರ್ಯವಾಹ ಆಶ್ವಥ್, ಗೋ ಸಾವಾ ವಿಭಾಗದ ಸುಬ್ರಹ್ಮಣ್ಯ ವಡ್ಡಿನಬೈಲು, ಬಿಜೆಪಿ ರೈತ ಮೋರ್ಚಾದ ಶಿವಾನಂದ ಉಪಸ್ಥಿತರಿದ್ದರು.
ಮಂಜುನಾಥ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ರಿಪ್ಪನ್‌ಪೇಟೆ ; ವಿನಾಯಕ ವೃತ್ತದಲ್ಲಿ ಹಿಂದೂ ಧ್ವಜಾರೋಹಣ
ರಿಪ್ಪನ್‌ಪೇಟೆ ; ಇಲ್ಲಿನ ವಿನಾಯಕ ವೃತ್ತದಲ್ಲಿ ಯುಗಾದಿ ಹಬ್ಬದ ದಿನದಂದು ಭಾನುವಾರ ಬೆಳಗ್ಗೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯವರು ಹಿಂದೂ ಭಗವಾಧ್ವಜವನ್ನು ವಿನಾಯಕ ಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಜಿಎಸ್‌ಬಿ ಸಮಾಜದ ಅಧ್ಯಕ್ಷ ಗಣೇಶ್ ಕಾಮತ್ ಆರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಮುಖಂಡರಾದ ಎಂ.ಬಿ.ಮೃಜುನಾಥ, ಸುಧೀಂದ್ರ ಪೂಜಾರಿ, ವೈಜೆ.ಕೃಷ್ಣ, ವಾಸುಶೆಟ್ಟಿ, ಲಿಂಗಪ್ಪ ಕಗ್ಗಲಿ, ಮುರುಳಿಧರ ಕೆರೆಹಳ್ಳಿ, ಎಂ. ಸುರೇಶಸಿಂಗ್, ಈಶ್ವರಶೆಟ್ಟಿ, ಪಿ.ಸುಧೀರ್, ರಮೇಶ ಫ್ಯಾನ್ಸಿ, ತೀರ್ಥೇಶ್ ಅಡಿಕಟ್ಟು, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ಶ್ರೀನಿವಾಸ ಆಚಾರ್, ಮೋಹನ್, ಭಾಸ್ಕರ್ ಶೆಟ್ಟಿ, ಲಕ್ಷ್ಮಣ ಬಳ್ಳಾರಿ, ಪಿ.ರಮೇಶ್, ರವೀಂದ್ರ ಕೆರೆಹಳ್ಳಿ, ಬಸವರಾಜ ಪವಾರ್, ರಾಮಚಂದ್ರ ಬಳೆಗಾರ್, ಇನ್ನಿತರ ಹಲವರು ಹಾಜರಿದ್ದರು.