ಹೊಸನಗರ

ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನ : ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದ ವೈಷ್ಣವಿಗೆ ಸನ್ಮಾನ

ಹೊಸನಗರ ; ಪಟ್ಟಣದ ವಿದ್ಯುತ್ ಗುತ್ತಿಗೆದಾರ ಬಾವಿಕಟ್ಟೆ ಸತೀಶ್‌ರವರ ಸಹೋದರಿ ಜಯಲಕ್ಷ್ಮಿ ವಿಜಯಕುಮಾರ್‌ರವರ ಪುತ್ರಿ ವೈಷ್ಣವಿ ವಿಜಯಕುಮಾರ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿ 2024-25ನೇ ಸಾಲಿನ ಪರೀಕ್ಷೆ ಎದುರಿಸಿದ್ದು ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ 625ಕ್ಕೆ 618 ಅಂಕ ಗಳಿಸಿದ್ದು ಇದರಿಂದ ಅಸಮಾದಾನಗೊಂಡ ವಿದ್ಯಾರ್ಥಿನಿ ವೈಷ್ಣವಿ ಮರು ಮೌಲ್ಯಮಾಪನಕ್ಕೆ ಹಾಕಿದಾಗ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಪರಿಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ: ಕಟ್ಟೆ ಸುರೇಶ್

📢 Stay Updated! Join our WhatsApp Channel Now →

ಯಾವುದೇ ಕೆಲಸ ಮಾಡಬೇಕಾದರೆ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಪರಿಶ್ರಮ ಇದ್ದಾಗ ಮಾತ್ರ ಯಶಸ್ವಿಗೊಳಿಸಲು ಸಾಧ್ಯ. ಅವರ ಜೊತೆಗೆ ಬೆಂಬಲಕ್ಕಾಗಿ ತಾಯಿ ಹಾಗೂ ಹಿರಿಯರ ಬೆಂಬಲ ಬೇಕು ಎಂದು ಸ್ಫೋಟ್ಸ್ ಅಸೋಸಿಯೇಶನ್ ವ್ಯವಸ್ಥಾಪಕ ಕಟ್ಟೆ ಸುರೇಶ್‌ ಹೇಳಿದರು.

ವೈಷ್ಣವಿ ವಿಜಯಕುಮಾರ್‌ರವರ ಮನೆಗೆ ಕಟ್ಟೆ ಸುರೇಶ್‌ರವರ ನೇತೃತ್ವದ ಹೊಸನಗರದ ಸ್ನೇಹ ಬಳಗದ ತಂಡ ಭೇಟಿ ನೀಡಿ ವೈಷ್ಣವಿಯವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅವರು ಮಾತನಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ವೈಷ್ಣವಿಯವರು ಹೊಸನಗರ ತಾಲ್ಲೂಕಿಗೆ ಕೀರ್ತಿಪಾತಕೆ ಹಾರಿಸಿದ್ದಾರೆ. ಇವರ ಹಿಂದೆ ಇವರ ತಾಯಿ ಜಯಲಕ್ಷ್ಮಿ ಅಜ್ಜಿ ಸೀತಮ್ಮ ಹಾಗೂ ಮಾವಂದಿರಾದ ವೆಂಕಟೇಶ್ ಅತ್ತೆ ಜಯಲಕ್ಷ್ಮಿ ಬಾವಿಕಟ್ಟೆ ಸತೀಶ್, ರಾಜುರವರ ಕೊಡುಗೆ ಅಪಾರವಾಗಿದ್ದು ಇದರ ಜೊತೆಗೆ ಶಿಕ್ಷಕರ ಪಾತ್ರವೂ ಹೆಚ್ಚಿನ ಪ್ರಮಾಣದಲ್ಲಿದೆ ಮುಂದಿನ ದಿನದಲ್ಲಿ ಇನ್ನೂ ಯಶಸ್ವು ಸಿಗಲಿ ಎಂದು ಸಿಹಿ ತಿನಿಸಿ ತಾಯಿ ವಿಜಯಕುಮಾರಿಯವರನ್ನು ಹಾಗೂ ವೈಷ್ಣವಿಯವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಳೂರು ಸೊಸೈಟಿ ನಿರ್ದೆಶಕರಾದ ಹೆಚ್. ಶ್ರೀನಿವಾಸ್, ಮುರುಳಿಧರ ಹತ್ವಾರ್, ಜಿ.ಟಿ ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಗುತ್ತಿಗೆದಾರ ಹೆಚ್ ಮಹಾಬಲ, ಕೆ.ಜಿ ನಾಗೇಶ್, ಗೌತಮ್ ಕುಮಾರಸ್ವಾಮಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಾಸಂತಿ ರಾಜೇಂದ್ರ ಕೊತ್ವಾಲ್, ಕಟ್ಟೆ ಸುರೇಶ್, ಮೋಹನ್ ಮೋಹನ್ ಶೆಣೈ, ಗುತ್ತಿಗೆದಾರ ದಿವಾಕರ್ ಶೆಟ್ಟಿ, ವೆಂಕಟೇಶ್, ದೈಹಿಕ ಶಿಕ್ಷಕಿ ಅತ್ತೆ ಜಯಲಕ್ಷ್ಮಿ ವೆಂಕಟೇಶ್, ಬಾವಿಕಟ್ಟೆ ಸತೀಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>