ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ !

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಇರುವ ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು  ಶೌಚಾಲಯಕ್ಕೆ ಹೋಗಲು ನೀರಿಲ್ಲದೆ  ಪರದಾಡುವಂತಾಗಿದೆ ಎಂದು ಕಾಲೇಜ್ ವಿದ್ಯಾರ್ಥಿಗಳು ತಮ್ಮ ನೋವಯನ್ನು  ಮಾಧ್ಯಮದವರ ಬಳಿ ಹಂಚಿಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಒಂದು ಎರಡು ವರ್ಷದ ಹಿಂದೆ  ಕಾಲೇಜ್ ಅವರಣದೊಳಗೆ ಕೊಳವೆ ಬಾವಿಯನ್ನು ತೆಗೆಸಲಾಗಿದ್ದು ಆ ಕೊಳವೆ ಬಾವಿ ಸಂಪೂರ್ಣವಾಗಿ ಬತ್ತಿ ಹೋಗಿ ಮೋಟಾರ್‌ನಲ್ಲಿ ನೀರು ಬಾರದೇ ವಿದ್ಯಾರ್ಥಿಗಳು ಕುಡಿಯುವ ನೀರಿಲ್ಲದೆ ಮತ್ತು ಶೌಚಾಲಯಕ್ಕೂ ನೀರಿಲ್ಲದೆ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಕಾಲೇಜ್‌ನಲ್ಲಿ ಸುಮಾರು 700 ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ  450 ಕ್ಕೂ ಅಧಿಕ ವಿದ್ಯಾರ್ಥಿನಿರು ಮತ್ತು 250 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪ್ರಾಚಾರ್ಯರು ಸೇರಿದಂತೆ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗ ಸೇರಿದಂತೆ 45 ಕ್ಕೂ ಅಧಿಕ ಜನ ಕಾಲೇಜ್‌ನಲ್ಲಿದ್ದು ಇವರಿಗೆ ಕುಡಿಯಲು ಮತ್ತು ಶೌಚಾಲಯಕ್ಕೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಕಾಲವಾಗಿರುವ ಕಾರಣ ಬಾಯಾರಿಕೆ ತಣಿಸಿಕೊಳ್ಳಲು ನೀರಿಗಾಗಿ ಪರದಾಡಬೇಕಾಗಿದೆ. ಈ ಕೂಡಲೇ ಸಂಬಂಧಪಟ್ಟ ಕಾಲೇಜ್ ಪ್ರಚಾರ್ಯರ ಮತ್ತು ಸಿ.ಡಿ.ಸಿ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತುರ್ತು ಕೊಳವೆ ಬಾವಿಯನ್ನು ತೆಗೆಸುವ ಮೂಲಕ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ  ವಿದ್ಯಾರ್ಥಿ ಸಮೂಹ ಆಗ್ರಹಿಸಿದ್ದಾರೆ.

Leave a Comment