ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಬೇಕು ; ಜಿಲ್ಲಾ ನ್ಯಾಯಾಧೀಶ ಎಂ.ಎಸ್. ಸಂತೋಷ್

Written by Mahesh Hindlemane

Published on:

ಹೊಸನಗರ ; ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಾನೂನಿನ ಅರಿವು ಮತ್ತು ಸಂವಿಧಾನ ಪರಿಚಯ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ತಾಲ್ಲೂಕಿನ ಹುಂಚ ಹೋಬಳಿಯ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಂತೆ ಹೆಚ್ಚಿನ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ  ಜಿಲ್ಲೆಯಾದ್ಯಾಂತ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗೌರವಾನ್ವಿತ ಹಿರಿಯ ವ್ಯವಹಾರಗಳ ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಂ.ಎಸ್. ಸಂತೋಷ್  ಮಾತನಾಡಿ, ಮಕ್ಕಳಿಗೆ ಪರವಾನಿಗೆ ಇಲ್ಲದೆ ದ್ವಿಚಕ್ರ ವಾಹನ ಓಡಿಸುವಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಂದ ಆಗುವ ಅನಾಹುತಗಳು ಮತ್ತು ತಂದೆ-ತಾಯಿಗಳಿಗೆ ಆಗುವ ಆಘಾತಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಅಲ್ಲದೆ, ಕಾನೂನಿನಲ್ಲಿ ಪ್ರತಿಯೊಬ್ಬನು ತಾನು ನಂಬರ್ ಒನ್ ಆಗುವ ಪ್ರಯತ್ನ ಮಾಡುವುದು ಕರ್ತವ್ಯವಾಗಿದೆ ಎಂಬ ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ನಜಹತ್ ಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಂಚ ಹೋಬಳಿ ಕಸಾಪ ಘಟಕದ ಅಧ್ಯಕ್ಷ  ಹೆಚ್.ಎಂ. ಬಷೀರ್ ಅಹಮ್ಮದ್ ಸ್ವಾಗತಿಸಿ, ಉಪನ್ಯಾಸಕ ಫ್ರಾನ್ಸಿಸ್ ಬೆಂಜಮಿನ್ ನಿರೂಪಿಸಿದರು. ಶಂಕರಪ್ಪ ಕೆ ಎಸ್ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಗರ್ತಿಕೆರೆ  ಸಚಿನ್ ಗೌಡ, ಸೋಮಶೇಖರ ಟಿ.ಡಿ, ಸದಾನಂದ ಸೇರಿದಂತೆ ಕಸಾಪ ಕಾರ್ಯದರ್ಶಿ ಕೆ ಜಿ ನಾಗೇಶ್, ಅಶ್ವಿನಿ ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಸಾಪ ವತಿಯಿಂದ ನ್ಯಾಯಮೂರ್ತಿ ಎಂ.ಎಸ್.  ಸಂತೋಷ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Leave a Comment