ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಕಾರಿ

Written by malnadtimes.com

Published on:

ರಿಪ್ಪನ್‌ಪೇಟೆ ; ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದೆಂದು ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ಏರ್ಪಡಿಸಲಾಗಿರುವ ಹಳ್ಳಿ ಮಕ್ಕಳ ರಂಗ ಹಬ್ಬ-2025 ತರಬೇತಿ ಶಿಬಿರದಲ್ಲಿ ಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡಿ, ಮಕ್ಕಳಲ್ಲಿನ ಕಲೆ ಸಾಹಿತ್ಯ ಇನ್ನಿತರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಬರೀ ಪಠ್ಯ ಪುಸ್ತಕದ ಓದಿನ ಕಡೆಗೆ ಮಕ್ಕಳಲ್ಲಿ ಒತ್ತಡ ಹಾಕದೆ ಆವರಿಗೆ ರಜೆ ದಿನಗಳಲ್ಲಿ ಇಂತಹ ಕಲಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಒತ್ತು ನೀಡಬೇಕು ಮತ್ತು ಉತ್ತಮ ಶಿಕ್ಷಣದೊಂದಿಗೆ ಜಾನಪದ ಕಲೆ ಸಾಹಿತ್ಯದ ಅರಿವು ಮೂಡಿಸಿ ಮುಂದಿನ ಪೀಳಿಗಗೆ ಪರಿಚಯಿಸುವ ಕೆಲಸ ಮಾಡಬೇಕು ಆಗ ನಮ್ಮ ಸಂಸ್ಕೃತಿ ಸಂಸ್ಕಾರ ಉಳಿಸಲು ಸಾಧ್ಯವೆಂದರು.

ರಂಗ ನಿರ್ದೇಶಕ ಡಾ.ಆರ್.ಗಣೇಶ ಮಸರೂರು, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಈಶ್ವರಶೆಟ್ಟಿ, ರೈತ ಸಂಘದ ಮುಖಂಡ ಈಶ್ವರಪ್ಪಗೌಡ ಕುಕ್ಕಳಲೇ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ಲಕ್ಷ್ಮಿ ಮಸರೂರು ಎಂ.ಎಸ್.ಜಗದೀಶ, ಧರ್ಮರಾಜ ಸಮಟಗಾರು, ಮೈಕ್ ದಾನಪ್ಪ ಮಲ್ಲಾಪುರ, ಅಶ್ವಿನಿ ಗಣೇಶ ಇನ್ನಿತರರು ಹಾಜರಿದ್ದರು.

Leave a Comment