ಸಹಾಯ ಹಸ್ತಕ್ಕೆ ಕಾದಿರುವ ಸುರೇಶ್ ಕುಟುಂಬ

Written by Mahesha Hindlemane

Published on:

ಹೊಸನಗರ ; ತೀರ್ಥಹಳ್ಳಿಯಲ್ಲಿ ಪೋರ್ಲುಹೇರ್ ಕಟ್ಟಿಂಗ್ ಸೆಲೂನ್ ನಡೆಸಿಕೊಂಡು ತಮ್ಮ 6 ಸದಸ್ಯರಿರುವ ಕುಟುಂಬದ ಜೀವನ ಸಾಗಿಸುತ್ತಾ ಬರುತ್ತಿರುವ ಎ.ವಿ ಸುರೇಶ್ ಆರಗ ಇವರ ಬದುಕಿಗೆ ವಿಧಿಲೀಲೆಯಿಂದ ಕಳೆದ 1 ವರ್ಷದ ಹಿಂದೆ 2 ಕಿಡ್ನಿ ವೈಫಲ್ಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಸುಮಾರು ಅಂದಾಜು 2 ಲಕ್ಷ ರೂ. ಖರ್ಚು ಮಾಡಿ ನಂತರ ವಾರಕ್ಕೆ ಮೂರು ಬಾರಿಯಂತೆ ಡಯಾಲಿಸಿಸ್‌ ಮಾಡಿಸಿಕೊಂಡು ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಕುಟುಂಬದ ಜೀವನ ಹಾಗೂ ಔಷಧಿ ವೆಚ್ಚ ಭರಿಸಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಸಾಗಿಸುತ್ತಿರುವ ಸುರೇಶ್, ಇತ್ತೀಚೆಗೆ ಇವರಿಗೆ ಅಂಗಡಿಯಲ್ಲಿ ನಿಂತುಕೊಂಡು ಕೆಲಸ ಮಾಡಲು ಆಗುತ್ತಿಲ್ಲ. ತುಂಬಾ ನಿಶ್ಯಕ್ತರಾಗಿದ್ದಾರೆ. ಇವರಿಗೆ 3 ಮಕ್ಕಳು, ವಯಸ್ಸಾದ ತಾಯಿ ಹಾಗೂ ಓರ್ವ ಅಂಗವಿಕಲ ಸಹೋದರಿ ಇದ್ದು, ಬೇರೆ ಯಾವುದೇ ಆರ್ಥಿಕ ಮೂಲವಿಲ್ಲದಿರುವುದರಿಂದ ಇವರ ಕುಟುಂಬದ ಜೀವನ ಹಾಗೂ ಇವರ ಔಷಧಿಗೆ ತಿಂಗಳಿಗೆ ಸುಮಾರು 20 ಸಾವಿರ ರೂಪಾಯಿ ತಗುಲುತ್ತಿದೆ‌.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರ ಜೀವನ ತುಂಬಾ ಕಷ್ಟಕರವಾಗಿರುವುದರಿಂದ ದಯಮಾಡಿ ವೈಯಕ್ತಿವಾಗಿ ದಾನಿಗಳಿಂದ, ಸೇವಾ ಸಂಸ್ಥೆಗಳಿಂದ ಹಾಗೂ ಸ್ನೇಹಿತರಿಂದ ಇನ್ನಿತರೆ ಮೂಲಗಳಿಂದ ಯಾರಾದರೂ ಸಹಾಯ ಹಸ್ತ ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಸಹಾಯ ಹಸ್ತ ನೀಡಬೇಕೆಂದು ಕೇಳಿಕೊಂಡಿದ್ದಾರೆ.

Name : ಸುರೇಶ ಎ.ವಿ
Bank ; ಯೂನಿಯನ್ ಬ್ಯಾಂಕ್ ಆಫ್ ಇಂಡಿಯ, ಆರಗ ತೀರ್ಥಹಳ್ಳಿ
A/C : 520101071407088
IFSC CODE : UBIN0902179

Leave a Comment