Swavalambi-sarathi-scheme :ಕಾರು ಖರೀದಿಗೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಸ್ವಾವಲಂಬಿ ಸಾರಥಿ ಯೋಜನೆ ಸಬ್ಸಿಡಿಗಾಗಿ ಆನ್‌ಲೈನ್ ಅರ್ಜಿ ಪ್ರಾರಂಭವಾಗಿದೆ. ಯುವಕರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಇಂದು ನಾವು ಈ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮಗೆ ಒದಗಿಸುತ್ತೇವೆ.
ಈ ಯೋಜನೆಯಡಿಯಲ್ಲಿ, ಬ್ಯಾಂಕ್ ಅನುಮೋದಿತ ಟ್ಯಾಕ್ಸಿಗಳು/ ಗೂಡ್ಸ್ ವಾಹನ ಖರೀದಿಗೆ ಪ್ರತಿ ಫಲಾನುಭವಿಗೆ ವಾಹನ ಮೌಲ್ಯದ 50% ಅಥವಾ ಗರಿಷ್ಠ 3 ಲಕ್ಷ ರೂ., ಪ್ರಯಾಣಿಕ ರಿಕ್ಷಾ ಖರೀದಿಗೆ ಗರಿಷ್ಠ 75,000 ರೂ. ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಭಾಗಕ್ಕೆ ಬ್ಯಾಂಕ್ ಸಾಲವನ್ನು ಕೋರುವ ಬ್ಯಾಂಕ್ ಪತ್ರವನ್ನು ಒದಗಿಸಬೇಕು. ಈ ಯೋಜನೆಯ ವಿವರಗಳನ್ನು ಪರಿಶೀಲಿಸಿ.

ಯಾರು ಅರ್ಜಿ ಸಲ್ಲಿಸಲು ಅರ್ಹರು?
- ಹಿಂದುಳಿದ ವರ್ಗ ಪ್ರ-1, 2A, 2B, 3A, 3B
- 21 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕನಾಗಿರಬೇಕು
- ಕುಟುಂಬದ ವಾರ್ಷಿಕ ಆದಾಯವು 98,000 ಮತ್ತು 1.2 ಲಕ್ಷ ರೂಪಾಯಿಗಳ ನಡುವೆ ಇರಬೇಕು.
- ವಾಹನ ನೋಂದಣಿ: ಕಾರು / ಲಘು ವಾಹನ
- ವಾಹನದ ವಿವರಗಳು: ಪ್ರವಾಸಿ ವಾಹನ ಅಥವಾ ಕಾರ್ಗೋ ವಾಹನ
ಸಾಲದ ವಿವರಗಳು
- ಸಹಾಯಧನ: ಗರಿಷ್ಠ 3 ಲಕ್ಷ.
- ಘಟಕ ವೆಚ್ಚ: 50%
- ನಾಲ್ಕು ಚಕ್ರದ ವಾಹನವನ್ನು ಖರೀದಿಸುವಾಗ, ಹಳದಿ ಬೋರ್ಡ್ ಕಡ್ಡಾಯ ಅಗತ್ಯವಿದೆ.
ಅರ್ಜಿಗೆ ಅಗತ್ಯವಾದ ದಾಖಲೆಗಳು
ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಪಾಸ್ ಬುಕ್, ಇತ್ತೀಚಿನ ಭಾವಚಿತ್ರ.
ಸಾರಥಿ ಯೋಜನೆಗೆ ಯಾವ ನಿಗಮದಲ್ಲಿ ಅರ್ಜಿ ಸಲ್ಲಿಸಬಹುದು?
ಒಕ್ಕಲಿಗ ಅಭಿವೃದ್ಧಿ ನಿಗಮ.ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ,ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ,ಸವಿತಾ ಸಮಾಜ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅಲೆಮಾರಿ & ಅರೆ ಅಲೆಮಾರಿ ಅಭಿವೃದ್ಧಿ ನಿಗಮ,
ಈ ಕಾರ್ಯಕ್ರಮವನ್ನು ಪಡೆಯಲು ಬಯಸುವವರು ಗ್ರಾಮ ಒನ್, ಕರ್ನಾಟಕ ಒನ್ ಅಥವಾ ತಮ್ಮ ಸಮೀಪದ ಯಾವುದೇ ಆನ್‌ಲೈನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಲಿಂಕ್: https://sevasindhu.karnataka.gov.in/Sevasindhu/Kannada
Read More
PMUY | ಪ್ರಧಾನಮಂತ್ರಿ ಉಜ್ವಲ ಯೋಜನೆ 2.O ಗೆ ಯಾರೆಲ್ಲ ಅರ್ಹರು?, ಅರ್ಜಿ ಸಲ್ಲಿಸುವುದು ಹೇಗೆ
ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಬದಲಾಯಿಸಬೇಕೆ ?ಇಲ್ಲಿದೆ ಮಾಹಿತಿ
Author Profile
-
ಅವರು MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.
Latest entries
FeaturedAugust 23, 2024Poultry and Goat Farming : ಕೋಳಿ ಹಾಗು ಮೇಕೆ ಸಾಕುವವರಿಗೆ ಸಿಗಲಿದೆ 50 ಲಕ್ಷ ರೂ. ವರೆಗಿನ ಸಾಲ ಸೌಲಭ್ಯ ! ಅರ್ಜಿ ಸಲ್ಲಿಕೆ ಹೇಗೆ, ಅರ್ಹತೆಗಳೇನು ? ಇಲ್ಲಿದೆ ಮಾಹಿತಿ
FeaturedAugust 23, 2024KSRTC Rules : ಉಚಿತ ಬಸ್ ಪ್ರಯಾಣ ಮಾಡುವವರು ಈ ನಿಯಮಗಳನ್ನ ಪಾಲಿಸುವುದು ಕಡ್ಡಾಯ !
FeaturedAugust 23, 2024PMJAY : ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳಿಗೆ ಬಂಪರ್ ಸುದ್ದಿ !
FeaturedAugust 22, 2024Scholarship : ಈ ವಿದ್ಯಾರ್ಥಿಗಳಿಗೆ ಸಿಗಲಿದೆ 2 ರಿಂದ 6 ಲಕ್ಷ ವಿದ್ಯಾರ್ಥಿ ವೇತನ!ಅರ್ಜಿ ಸಲ್ಲಿಸಲು ಅರ್ಹತೆಯೇನು ಇಲ್ಲಿದೆ ಮಾಹಿತಿ