Kannada News

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ Hombuja
ಹೊಸನಗರ

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ: ಬ್ರಹ್ಮಚರ್ಯ ವ್ರತದಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿ

'ಮಾನವನಿಗೆ ದೈಹಿಕ ಆರೋಗ್ಯ ಮತ್ತು ಶಕ್ತಿ ಅತ್ಯಗತ್ಯ. ನಾವು ಸೇವಿಸುವ ಸಾತ್ವಿಕ ಆಹಾರ ಹಾಗೂ ಜೀವನದ ಸನ್ಮಾರ್ಗದ ನಡೆನುಡಿಗಳು ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಡುತ್ತವೆ' ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಲಂಚ ಸ್ವೀಕರಿಸುತ್ತಿದ್ದಾಗಲೇ ಶಿವಮೊಗ್ಗ ಅಗ್ನಿಶಾಮಕ ಅಧಿಕಾರಿ 'ಲೋಕಾ' ಬಲೆಗೆ Fire
ಅಪರಾಧ ಸುದ್ದಿ

₹ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಶಿವಮೊಗ್ಗ ಅಗ್ನಿಶಾಮಕ ಅಧಿಕಾರಿ ‘ಲೋಕಾ’ ಬಲೆಗೆ

ಶಾಲಾ ಕಟ್ಟಡಕ್ಕೆ ಬೆಂಕಿ ಸುರಕ್ಷತಾ ಪ್ರಮಾಣಪತ್ರ (NOC) ನೀಡಲು ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್‌ಕುಮಾರ್ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ Veerashaiva
ಹೊಸನಗರ

ಹೊಸನಗರ : ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ

ವೀರಶೈವ ಪತ್ತಿನ ಸಹಕಾರ ಸಂಘವು ರೈತರು ಹಾಗೂ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ₹9,56,630 ನಿವ್ವಳ ಲಾಭ ಗಳಿಸಿದೆ ಎಂದು ಸಾಗರ ಉಪ ನಿಬಂಧಕ ಹಾಗೂ ಸಂಘದ ವಿಶೇಷಾಧಿಕಾರಿ ಡಿ.ವಿ. ಶ್ರೀನಿವಾಸ್ ತಿಳಿಸಿದರು.

ಕಲಾತಂಡಗಳ ವೈಭವದೊಂದಿಗೆ ವಿಜೃಂಭಿಸಿದ ಗಣಪತಿಯ ರಾಜಬೀದಿ ಮೆರವಣಿಗೆ RPT
ಹೊಸನಗರ

ರಿಪ್ಪನ್‌ಪೇಟೆ: ಕಲಾತಂಡಗಳ ವೈಭವದೊಂದಿಗೆ ವಿಜೃಂಭಿಸಿದ ಗಣಪತಿಯ ರಾಜಬೀದಿ ಮೆರವಣಿಗೆ

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ವತಿಯಿಂದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ 59ನೇ ವರ್ಷದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವವು ಶ್ರದ್ಧಾಭಕ್ತಿ ಹಾಗೂ ಅದ್ಧೂರಿತನದಿಂದ ನಡೆಯುತ್ತಿದೆ.

ಮಳೆಗಾಗಿ ಕೊಳವಂಕ ಬಸವಣ್ಣನಿಗೆ ವಿಶೇಷ ಪೂಜೆ Kolavanka
ಹೊಸನಗರ

ಮಳೆಗಾಗಿ ಕೊಳವಂಕ ಬಸವಣ್ಣನಿಗೆ ವಿಶೇಷ ಪೂಜೆ

ಐತಿಹಾಸಿಕ ಕೊಳವಂಕದ ಶ್ರೀ ಬಸವಣ್ಣನವರ ದೇವಸ್ಥಾನದಲ್ಲಿ, ಸಕಾಲಕ್ಕೆ ಮಳೆಯಾಗಲಿ ಎಂದು ಪ್ರಾರ್ಥಿಸಿ ಗ್ರಾಮಸ್ಥರು ಹಾಗೂ ರೈತರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಕಳೂರು ರಾಮೇಶ್ವರ ಸಹಕಾರಿ ಸಂಘಕ್ಕೆ ವಜ್ರ ಮಹೋತ್ಸವ Kalur
ಹೊಸನಗರ

ಹೊಸನಗರ ಕಳೂರು ರಾಮೇಶ್ವರ ಸಹಕಾರಿ ಸಂಘಕ್ಕೆ ವಜ್ರ ಮಹೋತ್ಸವ ; ಸೆ.25ರಂದು ₹2.41 ಕೋಟಿ ವೆಚ್ಚದ ನೂತನ ಕಟ್ಟಡ, ಉಗ್ರಾಣಗಳ ಉದ್ಘಾಟನೆ

ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೆಪ್ಟೆಂಬರ್ 25ರಂದು ವಜ್ರ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಣಪತಿಗೆ ₹1.50 ಲಕ್ಷ ಮೌಲ್ಯದ ಬೆಳ್ಳಿ ಹಾರ ಸಮರ್ಪಿಸಿದ Shailaja
ಹೊಸನಗರ

ರಿಪ್ಪನ್‌ಪೇಟೆ: ಗಣಪತಿಗೆ ₹1.50 ಲಕ್ಷ ಮೌಲ್ಯದ ಬೆಳ್ಳಿ ಹಾರ ಸಮರ್ಪಿಸಿದ ಶೈಲಜಾ ಶಾನುಭೋಗ್

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಯ ನಿವಾಸಿಯಾದ ಶೈಲಜಾ ಶಾನುಭೋಗ್ ಅವರು, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸೇವಾ ಸಮಿತಿ 59ನೇ ವರ್ಷದ ಗಣೇಶೋತ್ಸವದಲ್ಲಿ ಗಣೇಶನಿಗೆ ಸುಮಾರು ₹1.50 ಲಕ್ಷ ಮೌಲ್ಯದ 320 ಗ್ರಾಂ ತೂಕದ ಬೆಳ್ಳಿ ಹಾರವನ್ನು ಭಕ್ತಿಯಿಂದ ಅರ್ಪಿಸಿದ್ದಾರೆ.

ಈಡಿಗ ಸಮಾಜದ ಒಳಪಂಗಡಗಳು ಒಂದಾಗದಿದ್ದರೆ ಅಸ್ತಿತ್ವಕ್ಕೆ ಧಕ್ಕೆ Prathibha
ಶಿಕಾರಿಪುರ

ಈಡಿಗ ಸಮಾಜದ ಒಳಪಂಗಡಗಳು ಒಂದಾಗದಿದ್ದರೆ ಅಸ್ತಿತ್ವಕ್ಕೆ ಧಕ್ಕೆ: ಉಪನ್ಯಾಸಕಿ ಡಿ.ಪಿ. ಪ್ರತಿಭಾ

ಶಿಕಾರಿಪುರ: “ರಾಜ್ಯದಾದ್ಯಂತ ವಿಸ್ತರಿಸಿರುವ ಈಡಿಗ ಸಮಾಜದ ಜನರು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಪೂಜಾರಿ, ಮಲೆನಾಡು ಭಾಗಗಳಾದ ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರಗಳಲ್ಲಿ ದೀವರು, ಶಿರಸಿ ಪ್ರದೇಶದಲ್ಲಿ ನಾಮಧಾರಿ ನಾಯಕರು ಮತ್ತು ಬೆಂಗಳೂರು-ಮೈಸೂರು ಭಾಗಗಳಲ್ಲಿ ಈಡಿಗರು ಎಂದು ಕರೆಯಲ್ಪಡುತ್ತಾರೆ. ಈ ಎಲ್ಲ ಒಳಪಂಗಡಗಳು ಒಂದಾಗದಿದ್ದರೆ ಸಮುದಾಯದ ಅಸ್ತಿತ್ವವೇ ಚಿದ್ರವಾಗುತ್ತದೆ” ಎಂದು ಶಿವಮೊಗ್ಗದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಿ.ಪಿ. ಪ್ರತಿಭಾ ಎಚ್ಚರಿಸಿದರು.

ಮನೆಯ ಅಂಗಳ ಹಾಗೂ ರಸ್ತೆ ಸ್ವಚ್ಛತೆ ನಮ್ಮದೇ ಹೊಣೆ Sums Suresh
ಹೊಸನಗರ

ಮನೆಯ ಅಂಗಳ ಹಾಗೂ ರಸ್ತೆ ಸ್ವಚ್ಛತೆ ನಮ್ಮದೇ ಹೊಣೆ : ಸುಮಾ ಸುರೇಶ್

ಹೊಸನಗರ: ನಮ್ಮ ಮನೆ ಸುತ್ತಲಿನ ಪರಿಸರವನ್ನು ನಿರಂತರವಾಗಿ ಪರಿಶುದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಮನೆಯ ಮುಂಭಾಗದ ರಸ್ತೆಗಳನ್ನು ನಾವೇ ಸ್ವಚ್ಛಗೊಳಿಸಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಾ ಸುರೇಶ್ ತಿಳಿಸಿದರು.

error: Content is protected !!