RIPPONPETE ; ಬೆನ್ನು, ಸೊಂಟ, ಮೈ-ಕೈ ನೋವು ಇದ್ದವರು ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಸಾಕು ತಕ್ಷಣ ರೋಗವೇ ಗುಣಮುಖವಾಗುವುದು. ಇನ್ನೂ ಹೃದಯ ಬೇನೆ ಇದ್ದವರು ವಾಹನದಲ್ಲಿ ಪ್ರಯಾಣಿಸಿದರೆ ಆಸ್ಪತ್ರೆಗೆ ಹೋಗುವುದೇ ಬೇಡಾ ಪ್ರಾಣಪಕ್ಷಿ ಹೋಗುವುದಂತು ನಿಶ್ಚಿತ. ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರಂತು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಂತು ಬೇಡಾವೆ ಬೇಡಾ. ವಾಹನದಲ್ಲ್ ಮಾರ್ಗ ಮಧ್ಯದಲ್ಲಿ ಹೆರಿಗೆಯಾಗಿ ಮನೆಗೋ ಮಸಣಕ್ಕೋ ಹೋಗುವುದಂತು ಗ್ಯಾರಂಟಿ. ಏಕೆ ಹೀಗೆಲ್ಲಾ ಪೀಠಿಕೆ ಎಂದು ಆಶ್ಚರ್ಯವೇ ? ಹಾಗಾಗಿದೆ ಆಯನೂರು – ಹೊಸನಗರ ಮಾರ್ಗದ ರಾಜ್ಯ ಹೆದ್ದಾರಿ 26 ರಲ್ಲಿನ ರಸ್ತೆಯ ಸ್ಥಿತಿ.
ಯಾರಿಗೆ ಹೇಳುವುದು ಎಂಬ ಚಿಂತೆ ಕಾಡುವಂತಾಗಿದ್ದರೆ. ಈಗ ಆ ಹೊಂಡಗಳಿಗೆ ಮಣ್ಣು ಹಾಕಿ ಕೆಸರು ಗದ್ದೆಯಂತಾಗಿ ಇಂದು, ನಾಳೆ ಭತ್ತ ಅಥವಾ ಬಾಳೆ ಗಿಡಗಳನ್ನು ನೆಟ್ಟರೆ ಸಾಕು ಫಲ ತಿನ್ನುವುದೊಂದೆ ಬಾಕಿ. ಮಳೆ ಬಂದರೆ ಸಂಪರ್ಕದ ರಾಜ್ಯ ಹೆದ್ದಾರಿ ಈಜು ಕೊಳದಂತಾಗಿ ಕೆಸರು ನೀರು ತುಂಬಿಕೊಂಡು ಹೊಂಡ-ಗುಂಡಿ ಯಾವುದು ಎಂದು ತಿಳಿಯದೆ ಬೇಗ ಯಮಲೋಕ ಸೇರುವುದು ಪಕ್ಕ ಎನ್ನುವಂತಾಗಿದರೂ ಕೂಡಾ ಅಧಿಕಾರಿಗಳು ಮಾತ್ರ ನಿದ್ರೆಯಿಂದ ಎದ್ದು ಬಂದಂತೆ ಕಾಣುತ್ತಿಲ್ಲ.
ಐಶಾರಾಮಿ ಕಾರುಗಳಲ್ಲಿ ಓಡಾಡುವ ಇಲಾಖೆಯ ಅಧಿಕಾರಿಗಳಿಗೆ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದಿವೆ ಎಂಬ ಬಗ್ಗೆ ಸ್ಪಲ್ಪವೂ ತಿಳಿಯದವರಂತೆ ವರ್ತಿಸುತ್ತಿದ್ದಾರೆಂಬುದಕ್ಕೆ ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಲೇ ಸಾರ್ವಜನಿಕರ ಬಾಯಿಗೆ ಅಹಾರವಾಗಿದೆ.
ಶಿವಮೊಗ್ಗ, ಬೈಂದೂರು, ಭಟ್ಕಳ, ಕೊಲ್ಲೂರು, ಸಿಗಂದೂರು, ಉಡುಪಿ, ಕುಂದಾಪುರ ಮಾರ್ಗದ ಆಯನೂರಿನಿಂದ ಹೊಸನಗರ ವರೆಗಿನ ರಾಜ್ಯ ಹೆದ್ದಾರಿ ಮಂಡಘಟ್ಟ, ಚಿನ್ಮನೆ, 5ನೇ ಮೈಲಿಕಲ್ಲು, ಸೂಡೂರು, 9ನೇ ಮೈಲಿಕಲ್ಲು, ಅರಸಾಳು, ಬೆನವಳ್ಳಿ ರಿಪ್ಪನ್‌ಪೇಟೆ, ಕೋಡೂರು, 24 ಎಂ.ಎಸ್. ಹೀಗೆ ರಸ್ತೆ ಉದ್ದಕ್ಕೂ ಹೊಂಡ ಗುಂಡಿಗಳು ಬಿದ್ದು ಈಜು ಕೊಳದಂತಾಗಿದರೆ ಬೇಸಿಗೆಯಲ್ಲಿ ಗುಂಡಿಗೆ ತುಂಬಲಾದ ಮಣ್ಣಿನಿಂದಾಗಿ ವಾಹನಗಳು ಓಡಾಡಿದರೆ ಧೂಳು ಆವರಿಸಿ ದ್ವಿಚಕ್ರ ವಾಹಗಳ ಸವಾರರು ರಸ್ತೆ ಕಾಣದೇ ಹೊಂಡ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಕಾಲ ಸಹ ದೂರವಿಲ್ಲ ಎಂದು ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಈ ಮಧ್ಯೆ ಕೆಲವು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಇಲ್ಲಿನ ರಸ್ತೆಯ ಹೊಂಡ ಗುಂಡಿಯನ್ನು ತಪ್ಪಿಸಲು ಹೋಗುವ ವಾಹನದಲ್ಲೇ ಹೆರಿಗೆ ಸಹ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೆರಿಗೆ ನೋವಿನಲ್ಲಿ ಏನಾದರೂ ಸಮಸ್ಯೆ ಎದುರಾದರೆ ತಾಯಿ-ಮಗು ನೇರ ಮಸಣ ಸೇರಿದರೂ ಆಶ್ಚರ್ಯ ಪಡುವಂತಿಲ್ಲ.
ಹೀಗಿದೆ ನಮ್ಮ ರಾಜ್ಯ ಸರ್ಕಾರದ ಅವ್ಯವಸ್ಥೆ. ನಿತ್ಯ ಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿ ಲೋಕಾರ್ಪಣೆ ಎಂಬ ಬರೀ ಪ್ರಚಾರದಲ್ಲಿ ಜನರನ್ನು ಮರಳು ಮಾಡುತ್ತಿರುವ ಸರ್ಕಾರಕ್ಕೆ ಇಲ್ಲಿನ ಹೊಂಡ ಗುಂಡಿಯಲ್ಲಿ ನೀರು ತುಂಬಿ ಈಜು ಕೊಳದಂತಾಗಿರುವ ದೃಶ್ಯ ಮಾತ್ರ ಕಾಣಿಸಿಲ್ಲ.