ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಸಮಟಗಾರು ಶಾಲೆ ಶಿಕ್ಷಕಿ ಅಂಬಿಕಾ ಎಲ್.ಯು.    

Written by malnadtimes.com

Published on:

RIPPONPETE ; ಅನುಭವ ಜನ್ಯ ಕಲಿಕೆ, ಪರಿಸರ ಕಲಿಕೆ, ನಾವೀನ್ಯಯುತ ಚಟುವಟಿಕೆಗಳ ಮೂಲಕ ಹೆಸರಾಗಿರುವ ಶಾಲೆ ಸ.ಹಿ.ಪ್ರಾ. ಶಾಲೆ ಸಮಟಗಾರು ಶಾಲೆ. ರಾಜ್ಯ ಪ್ರಶಸ್ತಿ ಪಡೆದಿರುವ ರತ್ನ ಕುಮಾರಿ ಎಸ್ ಇರುವ, ಈ ಶಾಲೆಯ ಇನ್ನೋರ್ವ ಶಿಕ್ಷಕಿ ಅಂಬಿಕಾ ಲಕ್ಷ್ಮಣ್ ರಾವ್ ಉಡುಪಿ ಇವರು ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಜಿ.ಪಂ ಉಪ ನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬಿಕಾ ಎಲ್ ಯು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪರಿಚಯ :

ಮೂಲತಃ ರಿಪ್ಪನ್‌ಪೇಟೆಯವರಾದ ಅಂಬಿಕಾ, ಶಿಕ್ಷಕ ಚಂದ್ರಶೇಖರ ಎಂಬುವರನ್ನು ವಿವಾಹವಾಗಿ ಪ್ರಸ್ತುತ ಹಿಂಡ್ಲೆಮನೆಯಲ್ಲಿ ವಾಸವಾಗಿದ್ದು ಇವರು ಕಳೆದ 17 ವರ್ಷಗಳಿಂದ ಸಮಟಗಾರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲೆ ಪರಿಸರಮಿತ್ರ, ಧನ್ವಂತರಿ ಉತ್ತಮ ಪರಿಸರದ ಶಾಲೆ ಹತ್ತು ಹಲವು ಪ್ರಶಸ್ತಿ ಪಡೆಯುವಲ್ಲಿ ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಪರಿಶ್ರಮವೂ ಇದೆ.

ಚಿತ್ರ ರಚನೆ, ಕವನ ಕಥೆ ರಚನೆ, ಭಾಷಣ, ನಿರೂಪಣೆ ಮುಂತಾದ ಹವ್ಯಾಸಗಳಿರುವ ಇವರು ಪ್ರಶಸ್ತಿಗೆ ಭಾಜನಾಗಿರುವುದಕ್ಕೆ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ ಸಿ ಅಧ್ಯಕ್ಷರಾದ ಮೋಹನ್ ಹಾಗೂ ಸದಸ್ಯ ವೃಂದ, ಗ್ರಾಮಸ್ಥರು, ಪೋಷಕ ವೃಂದ ಅಭಿನಂದಿಸಿದ್ದಾರೆ.

Leave a Comment