Ripponpete

ಗರ್ತಿಕೆರೆಯಲ್ಲಿ ನಾಳೆ ಮಾತೃನುಡಿ 13ನೇ ವರ್ಷದ ಕರುನಾಡ ಹಬ್ಬ

ರಿಪ್ಪನ್‌ಪೇಟೆ ; ಅಮೃತ ಸಂಚಲನ ಯುವ ವೇದಿಕೆ ವತಿಯಿಂದ ಗರ್ತಿಕೆರೆಯಲ್ಲಿ ನಾಳೆ (ನ.04) ಮಾತೃನುಡಿ 13ನೇ ವರ್ಷದ ಕರುನಾಡ ಹಬ್ಬ ಏರ್ಪಡಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಬೆಳಗ್ಗೆ 9.30ಕ್ಕೆ ಬಿ.ಎಸ್ ಪುರುಷೋತ್ತಮ್ ವೃತ್ತದಲ್ಲಿ ಕನ್ನಡ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ದೇವೇಂದ್ರಪ್ಪ ಬಿ ಬಸವಾಪುರ ನೆರವೇರಿಸಲಿದ್ದಾರೆ.

ಕಾರ್ಯಕ್ರಮಗಳು ;

ಸಂಜೆ 6:30ಕ್ಕೆ ಗರ್ತಿಕೆರೆ ಹೆಚ್. ಶಂಕರ್‌ರಾವ್ ರಂಗಮಂದಿರದಲ್ಲಿ ‘ನಾವು ನಮ್ಮವರು’ ಉದ್ಘಾಟನಾ ನೃತ್ಯ, ಕೆ.ಪಿ.ಎಸ್ ಅಮೃತ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 7:30ಕ್ಕೆ ‘ಕನ್ನಡ ಜ್ಯೋತಿ’ ಕರುನಾಡಿಗೆ ಬೆಳಕಿನ ಮೌನ ನಮನ ರಾತ್ರಿ 08:00 ಗಂಟೆಗೆ ಕಲಾಸಂಗಮ ಕಲಾವಿದರಿಂದ ವಿಜಯ್‌ ಕುಮಾರ್ ಕೊಡಿಯಾಲ್‌ ಬೈಲ್ ನಿರ್ದೇಶನದ ದೇಶ-ವಿದೇಶದಲ್ಲಿ ಅತಿ ಹೆಚ್ಚು ಪ್ರದರ್ಶನಗೊಂಡ ಅಮೋಘ ಕನ್ನಡ ನಾಟಕ ‘ಶಿವದೂತ ಗುಳಿಗ‘ ಕಾರ್ಯಕ್ರಮಗಳು ಜರುಗಲಿವೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!