ಹೊಸನಗರ : ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಗ್ರಾಮೀಣ ಬ್ಯಾಂಕ್ ಅಭಿವೃದ್ಧಿಗಾಗಿ ಸುಮಾರು 30 ವರ್ಷಗಳಿಂದ ಅಧ್ಯಕ್ಷರಾಗಿ ಸಾಕಷ್ಟು ಬಾರಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದು ನನ್ನ ಕಾಲಾವಧಿಯಲ್ಲಿ ಬ್ಯಾಂಕ್‌ಗೆ ಯಾವುದೇ ಚ್ಯುತಿ ಬಾರದಂತೆ ಹಾಗೂ ಬಡವರ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದ ಆವರಣದಲ್ಲಿ 80ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25ನೇ ಸಾಲಿನಲ್ಲಿ ಸುಮಾರು 8925 ಸದಸ್ಯರ ಬಲ ಹೊಂದಿದ್ದು ಪ್ರತಿಯೊಬ್ಬರು ಬ್ಯಾಂಕ್‌ನ ಸೇವೆಯ ಬಗ್ಗೆ ಎಲ್ಲಿಯೂ ಇಲ್ಲಿಯವರೆಗೆ ದೂರಿಲ್ಲ. ನಾವು 2024-25ನೇ ಸಾಲಿನಲ್ಲಿ ₹ 12,05,924 ನಿವ್ವಳ ಲಾಭ ಗಳಿಸಿದ್ದು ನಮ್ಮ ಬ್ಯಾಂಕ್ ಸದಸ್ಯರಿಗೆ ಶೇ.3 ಲಾಭಾಂಶ ಹಂಚಿಕೆ ಮಾಡಲಾಗಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಲಾಭ ಗಳಿಸಿ ಸದಸ್ಯರಿಗೆ ಲಾಭಾಂಶ ಹಂಚುವ ಗುರಿಯನ್ನು ಹೊಂದಿದ್ದೇವೆ. ಸಾಲ ಪಡೆದವರು ನಿಗದಿತ ಸಾಲ ಮರುಪಾವತಿ ಮಾಡಿದರೆ ಅತೀ ಶೀಘ್ರದಲ್ಲಿಯೇ ಇನ್ನೂ ಹೆಚ್ಚಿನ ಲಾಭ ಗಳಿಸುವುದರ ಜೊತೆಗೆ ಬ್ಯಾಂಕ್‌ನ ಅಭಿವೃದ್ಧಿ ಪಥಕ್ಕೆ ಕೊಂಡ್ಯೊಯುವ ಆಸೆ ಹೊಂದಿದ್ದೇವೆ. ಇದಕ್ಕೆ ಬ್ಯಾಂಕ್ ಸದಸ್ಯರು ಸಾಲ ಪಡೆದ ಸದಸ್ಯರು ತಮ್ಮ ಕಂತಿನ ಹಣವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕೆಂದು ಈ ಮೂಲಕ ಕೇಳಿಕೊಂಡರು.
ಈ ಸಭೆಯಲ್ಲಿ ಉಪಾಧ್ಯಕ್ಷ ನಾಗೇಶ್ ವಾಲೆಮನೆ, ನಿರ್ದೇಶಕರಾದ ಮಹೇಂದ್ರ ಪಿ.ಸಿ, ಹೆಚ್.ಆರ್ ದೇವೆಂದ್ರಪ್ಪ, ವಿ.ವೈ ಹೇಮಾವತಿ, ಹೂವಮ್ಮ, ನರೇಂದ್ರ, ನಾಗೇಶ್ ಕೆ.ಎಸ್, ಸತೀಶ ಎಂ.ಟಿ, ಈಸ್ವರಪ್ಪ ಬಿ, ನಾಗೇಂದ್ರ, ವ್ಯವಸ್ಥಾಪಕರಾದ ಆಧಿಕೇಶವ, ಲೆಕ್ಕಾಧಿಕಾರಿ ರುಕ್ಮಿಣಿ ರವಿ, ಮಣಿಕಂಠ, ಶಿವಕುಮಾರ್ ಹೆಚ್.ಎಸ್, ರಾಜು ಶೆಟ್ಟಿ, ತೇಜಸ್ವಿನಿ, ಶಿವಾನಿ, ಶ್ರೀನಿಧಿ,ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.