ಹೊಸನಗರ ; ಭಗವಧ್ಗೀತೆ ಅಧ್ಯಯನ ವಾಚನ ಮಾಡುವುದರಿಂದ ನಮ್ಮ ಜೀವನದ ರೂಪುರೇಷೆ ಬದಲಾಗುತ್ತದೆ ಜೀವನದ ಏಳಿಗೆಗೆ ಅತ್ಯಂತ ಪೂರಕ. ಇಂದಿನ ಜನಜಂಗುಳಿಯ ಸಮಾಜದ ಮತ್ತು ಜಂಜಾಟದ ಬದುಕಿನಲ್ಲಿ ಶಾಂತಿ ಸಮಾದಾನ ನೆಮ್ಮದಿಯ ಕೊರತೆಯಿಂದಾಗಿ ಭಗವದ್ಗೀತೆಯನ್ನು ಅಳವಡಿಸಿಕೊಂಡಲ್ಲಿ ಖಂಡಿತವಾಗಿ ನೆಮ್ಮದಿಯನ್ನು ಕಾಣಬಹುದೆಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಕೋಟೆಗಾರ್ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಗ್ರಂಥವೇ ಭಗವದ್ಗೀತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರವಚನ ನೀಡಿ ಮಾತನಾಡಿದರು.
ಭಗವದ್ಗೀತೆಯಿಂದ ಧೈರ್ಯ, ಸ್ಥೈರ್ಯ, ಸಂದೋರ್ಭೋಚಿತ ನಿರ್ಧಾರ ತೆಗೆದುಕೊಳ್ಳಲು ಅಪಾಯದಿಂದ ಪಾರಗಲು ಸದೃಡತೆಯನ್ನು ಸಮಚ್ಛಿತತೆಯನ್ನು ಇನ್ನೂ ಮುಂತಾದ ಅಗತ್ಯ ಮೌಲ್ಯಗಳು ಈ ಭಗವದ್ಗೀತೆಯಿಂದ ಸಿಗುತ್ತದೆ. ರಕ್ತ ಸಂಚಾರದಿಂದ ಜೀವಿಯು ಹೇಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾವೋ ಈ ಭಗವದ್ಗೀತೆಯಿಂದ ಅಂತರ್‌ಮುಖಿಯಾಗಿ ಬದುಕನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಭಗವದ್ಗೀತೆಯ ಅಧ್ಯಯನದ ಮೂಲಕ ಈ ಅಭಿಯಾನದಲ್ಲಿ ತೊಡಗಿಸಿ ಸುಸ್ಥಿರ ಸಮಾಜವನ್ನು ನಿರ್ಮಿಸೋಣ ಅಖಂಡ ಭಾರತ ದೇಶದಲ್ಲಿ ಹಿಂದು ಧರ್ಮದ ನೆಲೆಯನ್ನು ಸ್ಥಾಪಿಸೋಣ ಎಂದರು.
ಭಗವದ್ಗೀತಾ ಅಭಿಯಾನದ ತಾಲ್ಲೂಕು ಅಧ್ಯಕ್ಷ ವಿಜೇಂದ್ರ ಶೇಟ್ ಮಾತನಾಡಿ, ಮಹರ್ಷಿ ವೇದವ್ಯಾಸರು ಅಖಂಡ ಭಾರತ ಖಂಡದ ಸಾಂಸ್ಕೃತಿಕ ನೇತಾರರು ಸರ್ವ ವೇದಗಳ ಸಾರವನ್ನು ಒಂದು ಅದ್ಭುತ ಕಥಾನಕದಂತೆ ಕಟ್ಟಿ ಮಹಾನ್ ರಾಜ ತಾಂತ್ರಿಕ ಮುತ್ಸದಿ ಶ್ರೀಕೃಷ್ಣನ ಮುಖಂತರ ಹೇಳಲ್ಪಟ್ಟ ಭಗವದ್ಗೀತೆಯು ಭಾರತ ಮಾತ್ರವಲ್ಲ ಇಡೀ ವಿಶ್ವದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿರುವ ವಿಶ್ವ ಮಾನ್ಯ ಭದವದ್ಗೀತೆ ಧಾರ್ಮಿಕ ಮೌಲ್ಯಗಳುಳ್ಳ ಗ್ರಂಥವು ಹೌದು. ಕರ್ಮ ಸಿದ್ಧಾಂತವೆಂದರೆ ಕೇವಲ ಮಾನವನ ಆಗುಹೋಗುಗಳು ದೇವರ ಮತ್ತು ಮಾನವ ಸಂಬಂಧ ಮಾತ್ರವಲ್ಲ ಅದು ಕಾಯಕದಾಸೋಹವೂ ಹೌದು ಶಿವಶರಣರಕಾಯಕ ತತ್ವದಂತೆ ಕರ್ಮ ಹೊಣೆಗಾರಿಕೆಯೂ ಮಹತ್ವದ್ದಾಗಿದೆ ಇವೂಗಳೆಲ್ಲವನ್ನು ತಿಳಿದುಕೊಳ್ಳಬೇಕೆಂದರೆ ಭಗವದ್ಗೀತೆಯ ಸಾರವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು.
ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಶಿಧರ್ ನಾಯ್ಕ್ ಮಾತನಾಡಿ, ಮನಸ್ಸು ಅಡ್ಡ ದಾರಿಯನ್ನು ಹಿಡಿಯುತ್ತದೆ ಭಯೋತ್ಪಾದನೆ ಅತ್ಯಾಚಾರ ಕೊಲೆ, ಸುಲಿಗೆ ಮಾದಕ ದ್ರವ್ಯ ಸೇವನೆ ಕೌಟಂಬಿಕ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವೆಲ್ಲವುಗಳಿಗೆ ವಿಕೃತ ಮನಸ್ಸೆ ಕಾರಣ ಅಪಕ್ವ ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ ಆಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ ಗೀತೆಯ ಮೂಲಕ ಸಮಾಜದಲ್ಲಿ ಸುಖ-ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ರೂಪಿಸುವುದಕ್ಕಾಗಿ ಈ ಭದವದ್ಗೀತೆ ಸಹಾಯ ಮಾಡಲಿದೆ ಎಂದರು.
ಈ ಭಗವದ್ಗೀತೆ ಕಾರ್ಯಕ್ರಮದಲ್ಲಿ ರಾಮಕೃಷ್ಣ, ಸಮಿತಿಯ ಅಧ್ಯಕ್ಷ ವಿಜೇಂದ್ರ ಶೇಟ್, ಕೋಟೆಗಾರ್ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಪಿ, ಆರ್ ಸಂಜೀವ, ಡಾ|| ರಾಮಚಂದ್ರರಾವ್, ಡಿ.ಎಂ ಸದಾಶಿವ ಶ್ರೇಷ್ಠಿ, ಅನುಪಮ ಸುರೇಶ್, ಎನ್ ಶ್ರೀಧರ ಉಡುಪ, ಕೋಟೆಗಾರ್ ವಿದ್ಯಾವರ್ಧಕ ಸಂಘದ ಮಹಿಳಾ ಅಧ್ಯಕ್ಷೆ ಶಾರದ, ಮಾವಿನಕೊಪ್ಪ ಸತೀಶ್, ಅರುಣ್‌ಕುಮಾರ್ ಮಂಜುನಾಥ್ ಸಂಜೀವ ಕೋಟೆಗಾರ್ ವಿದ್ಯಾವರ್ಧಕ ಸಂಘದ ಎಲ್ಲ ನಿರ್ದೇಶಕ ಸದಸ್ಯರುಗಳು ಮಹಿಳಾ ಸಂಘದ ಸದಸ್ಯರುಗಳು ಯುವಕ ಸಂಘದ ಸದಸ್ಯರುಗಳು ಹಾಗೂ ಊರಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ವಾಮೀಜಿಯವರ ಪ್ರವಚನವನ್ನು ಆಲಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





