RIPPONPETE ; ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ಚಿನ್ನಕ್ಕಿಂತ ಅನ್ನವೇ ಶ್ರೇಷ್ಟ. ಪ್ರತಿಯೊಬ್ಬರಿಗೂ ಭೂಮಿ, ನೀರು, ಅನ್ನ, ವಾಯು ಇವು ಅವಶ್ಯಕವಾಗಿ ಬೇಕು. ನಿಸರ್ಗವು ನಮಗೆ ಉಚಿತವಾಗಿ ದೊರಕಿಸಿಕೊಡುತ್ತದೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಕಗ್ಗಲಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವಯರು ನಮ್ಮೂರು ನಮ್ಮ ಕೆರೆ ಯೋಜನೆಯಡಿ ತಳಲೆ ತಲೆಕಟ್ಟು ಕೆರೆಯ ಹಸ್ತಾಂತರ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಆನ್ನಕೊಡುವ ರೈತ ಶ್ರೇಷ್ಟ ಅದರಂತೆ ಜ್ಞಾನಾಮೃತ ನೀಡುವ ಶ್ರೀಗುರುಶ್ರೇಷ್ಟ.ಹಾಗಾಗಿ ಜ್ಞಾನ ಮತ್ತು ಅನ್ನ ಬಹಳ ಶ್ರೇಷ್ಟ ಇಂದು ರೈತ ದಿನ ಎಷ್ಟು ವಿದ್ಯೆಗಳನ್ನು ಕಲಿತರು ಹೊಟ್ಟೆ ತುಂಬಿಸುವ ವಿದ್ಯ ಕೃಷಿ ಸಂಪ್ರದಾಯಕ ಕೃಷಿಯನ್ನು ಅವಲಂಬಿಸಿದಂತ ನಾಡು ನಮ್ಮ ಭಾರತ ದೇಶವಾಗಿದೆ ಎಂದರು.
ಪ್ರಕೃತಿಯು ಹಚ್ಚ ಹಸಿರಾಗಿರಬೇಕಾದರೆ ಶುದ್ದಗಾಳಿ, ಶುದ್ದವಾದ ನೀರು ಅವಶ್ಯ. ಹಿಂದಿನ ನಮ್ಮ ಪೂರ್ವಜರು ಅಲ್ಲಲ್ಲಿ ಕೆರೆಕಟ್ಟೆ ನಿರ್ಮಾಣ ಮಾಡಿ ನಾಡನ್ನು ಸಂವೃದ್ದಗೊಳಿಸಿದ್ದರೆಂದು ಹೇಳಿದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿ ಮಾತನಾಡಿ, ಸರ್ಕಾರ ಮಾಡದ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ನಮ್ಮೂರು ನಮ್ಮ ಕೆರೆ ಎಂಬ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿನ ಹಲವು ಕೆರೆಗಳು ಹೂಳು ತುಂಬಿ ಮುಚ್ಚಿ ಹೋಗಿದ್ದು ಅದಕ್ಕೆ ಕಾಯಕಲ್ಪ ನೀಡುವ ಮೂಲಕ ಹೊಳು ತಗೆಯುವುದರೊಂದಿಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಸುತ್ತಮುತ್ತಲಿನ ಕೆರೆಅಚ್ಚುಕಟ್ಟು ಜಮೀನಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮುಂದಾಲೋಚನೆ ಮತ್ತು ಅಭಿವೃದ್ದಿಯ ಕಾರ್ಯಕ್ರಮಗಳು ಜನಮಾನಸದಲ್ಲಿ ಉಳಿಯುವಂತೆ ಮಾಡಿರುವುದರ ಬಗ್ಗೆ ಪ್ರಶಂಸೆಯ ಮಾತನಾಡಿ, ಮದ್ಯವರ್ಜನ ಶಿಬಿರ ಸ್ವಸಹಾಯ ಸಂಘ ಹೀಗೆ ದುಡಿಮೆಯಲ್ಲಿನ ಹಣವನ್ನು ಉಳಿತಾಯ ಮಾಡಿಕೊಳ್ಳುವ ಮೂಲಕ ನಿರ್ಗತಿಕರ ಶ್ರೆಯೋಬಿವೃದ್ದಿಗೆ ಹಗಲಿರುಳು ಶ್ರಮಿಸುವ ಕರುಣಾಮಯಿ ದೇವರು ಎಂದು ಹೆಗ್ಗಡೆಯವರನ್ನು ವರ್ಣಿಸಿದರು. ಅವರ ಮಾರ್ಗದರ್ಶನ ಮತ್ತು ಇಂತಹ ಜನಹಿತ ಕಾರ್ಯಗಳು ನಮಗೆ ಸ್ಪೂರ್ತಿಯಾಗಿವೆ ಎಂದರು.
ಕೆರೆ ಸಮಿತಿ ಅಧ್ಯಕ್ಷ ನಿಂಗಪ್ಪ, ಹೊಸನಗರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪ್ರದೀಪ, ಇಂಜಿನಿಯರ್ ಗಣಪತಿ, ನಾಗರತ್ನ ದೇವರಾಜ್, ಕೆರೆ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಇನ್ನಿತರ ಹಲವರು ಹಾಜರಿದ್ದರು.