ಹೊಸನಗರ

ವಿದ್ಯಾರ್ಥಿಗಳ ಭವಿಷ್ಯ ಉಪನ್ಯಾಸಕರ ಕೈಯಲ್ಲಿದೆ ; ಚಂದ್ರಪ್ಪ ಗುಂಡುಪಲ್ಲಿ

ವಿದ್ಯಾರ್ಥಿಗಳ ಭವಿಷ್ಯ ಉಪನ್ಯಾಸಕರ ಕೈಯಲ್ಲಿದೆ ; ಚಂದ್ರಪ್ಪ ಗುಂಡುಪಲ್ಲಿ – InShot 20260721 175406479

ಹೊಸನಗರ : ಹದಿ ಹರೆಯದ ವಯಸ್ಸಿನಲ್ಲಿ ಕಾಲೇಜ್‌ಗ‌ಳಿಗೆ ಬರುತ್ತಾರೆ. ಜ್ಞಾನ ಶಕ್ತಿ ಕಡಿಮೆ ಹಾಗೂ ಮಂಡುತನದಿಂದ ವರ್ತಿಸುತ್ತಿರುವುದರಿಂದ ಅವರನ್ನು ತಿದ್ದಿ ಬುದ್ಧಿ ಮಾತಿನಿಂದ ಸರಿ ದಾರಿಗೆ ತರುವ ಹೊಣೆಗಾರಿಕೆ ಉಪನ್ಯಾಸಕ ವರ್ಗದವರದ್ದಾಗಿರುತ್ತದೆ ಎಂದು ಶಿವಮೊಗ್ಗ ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕ ಚಂದ್ರಪ್ಪ ಗುಂಡುಪಲ್ಲಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಆರ್ಯ ಈಡಿಗರ ಸಭಾಭವನದ ಆವರಣದಲ್ಲಿ 2026-27ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇತರೆ ವೃಂದ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರೌಢ ಶಾಲೆ ಮುಗಿಸಿ ಪ್ರಥಮ ಪಿಯುಸಿಗೆ ಬಂದಿರುತ್ತಾರೆ. ಇವರಿಗೆ ಬುದ್ಧಿಮಟ್ಟ ಕಡಿಮೆಯಿದ್ದು ಮಂಡುತನದಿಂದ ವರ್ತಿಸುತ್ತಾರೆ. ಇವರನ್ನು ತಿದ್ದಿ ಬುದ್ಧಿವಾದದ ಮಾತುಗಳನ್ನು ಹೇಳಿಕೊಟ್ಟು ಉತ್ತಮ ಮನುಷ್ಯರನ್ನಾಗಿಸುವ ಪ್ರಯತ್ನ ಉಪನ್ಯಾಸಕ ವರ್ಗ ಹಾಗೂ ಜೊತೆಗೆ ಪೋಷಕರು ಮಾಡಬೇಕಾಗುತ್ತದೆ ಉಪನ್ಯಾಸಕರ ಪ್ರಯತ್ನದಿಂದ ಖಂಡಿತವಾಗಿಯೂ ಅವರು ಉತ್ತಮ ಸಂಸ್ಕಾರದೊಂದಿಗೆ ತಮ್ಮ ಜೀವನವನ್ನು ತಾವೆ ನಡೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವುದರ ಜೊತೆಗೆ ಈ ದೇಶಕ್ಕೆ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿಯಾಗಿರುತ್ತದೆ ಎಂದರು.

ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಸ್ವಾಮಿರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜ್ ಮೂರು ವರ್ಷದಳಿಂದ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಎಲ್ಲ ಉಪನ್ಯಾಸಕ ಜವಾಬ್ದಾರಿಯುತವಾಗಿ ತಮಗೆ ನೀಡಿರುವ ವಿಷಯವನ್ನು ಉತ್ತಮವಾಗಿ ಭೋದಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಫಲಿತಾಂಶಕ್ಕಾಗಿ ಓದುತ್ತಿದ್ದಾರೆ ಮೂರು ವರ್ಷಗಳಿಂದ ಶಾಲೆಗೆ ಬೇಕಾಗಿರುವಂತಹ ಸಲಕರಣೆಗಳು ಸುಸಜ್ಜಿತ ಕಟ್ಟಡಗಳನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಪಿ ಸುರೇಶ್‌ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಕಾಲೇಜ್ ನಡೆಯುತ್ತಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಕಾಲೇಜ್ ಉಪನ್ಯಾಸಕ ಪ್ರಭಾಕರ್ ರಾವ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಪಿ ಸುರೇಶ್, ಕನ್ನಡ ಉಪನ್ಯಾಸಕರಾದ ರವಿ, ಡಾ. ಸುಮಾ ಕೆ.ಎಸ್, ದಾಮೋದರ ಶೆಣೈ, ಗಣಪತಿ ಎಂ, ಕೆ.ಟಿ ಶ್ರೀಧರ್, ಶಿವಕುಮಾರ ಸ್ವಾಮಿ, ರವಿಕುಮಾರ್, ತೇಜಶ್ವಿನಿ, ಕು. ಅನಿಷಾ, ಡೆಲ್ಸಿನ್ ಕೆವರ್ಟ್ ಮಾಹಂತೇಶ್, ಸಂತೋಷ್ ಇನ್ನೂ ಮುಂತಾದ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]