ಹೊಸನಗರ : ಹಿಂದಿನ ಕಾಲದಲ್ಲಿ ಬಡತನ ತಂಡಾವವಾಡುತ್ತಿತ್ತು. ಒಂದು ಕುಟುಂಬದಲ್ಲಿ ಏಳೆಂಟು ಮಕ್ಕಳಿರುತ್ತಿದ್ದವು. ಅವುಗಳಿಗೆ ಓದಿಸಿ ಉನ್ನತ ಶಿಕ್ಷಣ ನೀಡಬೇಕಾದರೆ ಕುಟುಂಬಕ್ಕೆ ತುಂಬ ಕಷ್ಟಕರವಾಗುತ್ತಿತ್ತು. ಆದರೂ ಮಕ್ಕಳಿಗೆ ವಿದ್ಯಾಭ್ಯಾಸ ಮಟುಕುಗೊಳಿಸುತ್ತಿರಲಿಲ್ಲ. ಕಷ್ಟಕರ ಕುಟುಂಬಕ್ಕೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಧಾನ-ಧರ್ಮ ಮಾಡಿದರೆ ಒಂದು ದೇವಸ್ಥಾನ ನಿರ್ಮಿಸಿದಷ್ಟು ಪುಣ್ಯ ಲಭಿಸುತ್ತದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಗಂಗಾಮತಸ್ಥರ ಜನಾಂಗದ ತಾಲ್ಲೂಕು ಅಧ್ಯಕ್ಷ ಹೆಚ್.ಬಿ ಚಿದಂಬರ ಹೇಳಿದರು.
ಕೋಡೂರು ಸಮೀಪದ ಜೇನುಕಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಗಂಗಾಮತಸ್ಥರ ಸಮಾಜ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಬದಲಾವಣೆಯಾಗಬೇಕಾದರೆ ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣಕ್ಕಾಗಿ ಒತ್ತು ನೀಡಬೇಕು. ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ನೀಡಬೇಕು. ಶಿಕ್ಷಣ ನೀಡಬೇಕಾದರೆ ಸಮಾಜದ ಗಣ್ಯ ವ್ಯಕ್ತಿಗಳು ಶಿಕ್ಷಣಕ್ಕಾಗಿ ಓದುವ ಮಕ್ಕಳನ್ನು ಗುರುತಿಸುವ ಕೆಲಸ ಮಾಡಬೇಕು. ಜೊತೆಗೆ ಮಕ್ಕಳ ಪೋಷಕರು ಕುಟುಂಬದ ನಿರ್ವಹಣೆಯಲ್ಲಿ ಓದಿಸಲು ಸಾಧ್ಯವೇ? ಎಂದು ಮನದಟ್ಟು ಮಾಡಿಕೊಂಡು ಓದಲು ಸಾಧ್ಯವಿಲ್ಲ ಎನಿಸಿದರೆ ವಿದ್ಯಾರ್ಥಿಗಳ ಓದಿಸುವ ಕಾರ್ಯಕ್ಕೆ ಮುಂದಾಗಬೇಕು. ಆಗಾ ಮಾತ್ರ ಸಮಾಜ ಉದ್ದಾರ ಮಾಡಲು ಸಾಧ್ಯ ಎಂದರು.

ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜಕ್ಕೆ ಲಾಭ : ಕಲಗೋಡು ರತ್ನಾಕರ್
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ವತಿಯಿಂದ ಶಿಕ್ಷಣಕ್ಕೆ ಒತ್ತು ನೀಡಿ ಓದಿಸಿದರೆ ಆ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಸಮಾಜಕ್ಕಾಗಿ ಉತ್ತಮ ಕೊಡುಗೆ ನೀಡಲಿದ್ದಾರೆ. ಜೊತೆಗೆ ಸಮಾಜದ ಋಣ ತೀರಿಸಲು ಇನ್ನೂ ಹತ್ತಾರೂ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಗಂಗಾಧರ್, ಕೆ. ಉಮೆಶ್, ಚಂದ್ರಶೇಖರ್, ಸತ್ಯನಾರಾಯಣ, ಗಣಪತಿ, ಬೆನಕಪ್ಪ, ಚಂದ್ರಪ್ಪ, ಮೇಘರಾಜ್, ಲೀಲಾವತಿ ನಾಗರಾಜ್, ಸರಸ್ವತಿ ಗಣಪತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

