ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಪ್ರಾಣಪಕ್ಷಿ ಬೆಳಗಾಗುವಷ್ಟರಲ್ಲಿ ಹಾರಿಹೋಗಿತ್ತು ! ಅಸಲಿಗೆ ಆಗಿದ್ದೇನು ?

Written by malnadtimes.com

Published on:

ತರೀಕೆರೆ : ಮುಳ್ಳು ಚುಚ್ಚಿದೆ ಎಂದು ತಿಳಿದು ಮಲಗಿದ ವ್ಯಕ್ತಿಯ ಪ್ರಾಣಪಕ್ಷಿ ಬೆಳಗಾಗುವುದರೊಳಗೆ ಹಾರಿಹೋದ ಘಟನೆ ತರಿಕೇರೆ (Tharikere) ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಗಂಗಪ್ಪ (48) ಮೃತ ದುರ್ದೈವಿ. ಗದ್ದೆ ಕೆಲಸಕ್ಕೆ ಹೋದಾಗ ಗಂಗಪ್ಪನವರಿಗೆ ಹಾವು (Snake) ಕಚ್ಚಿದೆ. ಆದರೆ ಮುಳ್ಳು ಚುಚ್ಚಿದೆ ಎಂದು ತಿಳಿದು ಅವರು ಮನೆಗೆ ಬಂದು ಊಟ ಮಾಡಿ ಮಲಗಿದ್ದಾರೆ.

Tharikere

ಹಾವು ಕಡಿದಿದ್ದು ಗೊತ್ತೇ ಇಲ್ಲ !

ಗಂಗಪ್ಪನಿಗೆ ಹಾವು ಕಡಿದಿರೋದು ಗೊತ್ತೇ ಇರಲಿಲ್ಲ. ಸಂಜೆ ಸರಿ ಸುಮಾರು 5ರಿಂದ 6 ಗಂಟೆ ಸಮಯಕ್ಕೆ ಹಾವು ಕಚ್ಚಿದ ಬಳಿಕ ಮನೆಗೆ ಬಂದು ಊಟ ಮಾಡಿ, ಮಲಗಿ ಬೆಳಗಿನಜಾವ 3 ಗಂಟೆಗೆ ನಿಧಾನಕ್ಕೆ ಹಾವಿನ ವಿಷ ದೇಹಕ್ಕೆ ಹರಡಿದ ಮೇಲೆ ಸುಸ್ತು-ವಾಂತಿ ಎಂದು ಕೂಗಾಡಿದ ಮೇಲೆ ಮನೆಯವರು ನೀರು ಕುಡಿಸಿದ ಮೇಲೆ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾರೆ.

ಒಂದು ಸಣ್ಣ ನಿರ್ಲಕ್ಷ್ಯದಿಂದ ವ್ಯಕ್ತಿಯ ಪ್ರಾಣವೇ ಹೋಗಿದ್ದು, ಈ ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Adike Price 27 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Leave a Comment