ಶಿವಮೊಗ್ಗ

ಮೋದಿ ಮನಗೆದ್ದ ಮಲೆನಾಡ ಕಲೆ: ಗುಜರಾತ್ ನೆಲದಲ್ಲಿ ಶಿವಮೊಗ್ಗ ವಿದ್ಯಾರ್ಥಿಗಳ ಯಕ್ಷ ವೈಭವ!

ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ‘ರಾಷ್ಟ್ರೀಯ ಏಕತಾ ದಿವಸ್’ ಸಮಾರಂಭದಲ್ಲಿ ಕರ್ನಾಟಕದ ಹೆಮ್ಮೆಯ ಗಂಡುಕಲೆ ಯಕ್ಷಗಾನವು ರಾಷ್ಟ್ರದ ಗಮನ ಸೆಳೆದಿದೆ.

PM Narendra Modi Yakshagana

ಶಿವಮೊಗ್ಗ: ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ‘ರಾಷ್ಟ್ರೀಯ ಏಕತಾ ದಿವಸ್’ ಸಮಾರಂಭದಲ್ಲಿ ಕರ್ನಾಟಕದ ಹೆಮ್ಮೆಯ ಗಂಡುಕಲೆ ಯಕ್ಷಗಾನವು ರಾಷ್ಟ್ರದ ಗಮನ ಸೆಳೆದಿದೆ. ಶಿವಮೊಗ್ಗ ಜಿಲ್ಲೆಯ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅದ್ಭುತ ಯಕ್ಷಗಾನ ನೃತ್ಯ-ರೂಪಕವನ್ನು ಪ್ರಸ್ತುತಪಡಿಸಿ ನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಪ್ರಧಾನಿ ಮೆಚ್ಚುಗೆ, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೆ ವಿವಿಧ ರಾಜ್ಯಗಳ ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣ, ಆಕರ್ಷಕ ಹೆಜ್ಜೆಗಾರಿಕೆ ಹಾಗೂ ಚಂಡೆ-ಮದ್ದಳೆಯ ನಾದದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಈ ವಿಶಿಷ್ಟ ಕಲಾ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಯಕ್ಷಗಾನ ಪ್ರದರ್ಶನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿಯವರಿಂದಲೇ ದೊರೆತ ಈ ಅಭಿನಂದನೆ ಮಲೆನಾಡಿನ ಯುವ ಕಲಾವಿದರಿಗೆ ಹೊಸ ಹುರುಪು ತಂದಿದೆ.

ಸಂಸ್ಥೆಗಳ ಶ್ರಮ ಮತ್ತು ಮಾರ್ಗದರ್ಶನ ಈ ಮಹತ್ವದ ಸಾಧನೆಯ ಹಿಂದೆ ‘ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್’ ಮತ್ತು ‘ಪಟ್ಲ ಫೌಂಡೇಶನ್’ ಸಂಸ್ಥೆಗಳ ಮಹತ್ತರ ಪರಿಶ್ರಮವಿದೆ.

ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಪುಷ್ಪಲತಾ ಹೆಚ್.ಎಸ್. ಹಾಗೂ ಕಾರ್ಯದರ್ಶಿ ಕು. ಭಾರತಿ ಎಸ್. ಅವರ ಸಂಘಟನೆ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ. ಕಳೆದ ಒಂದು ದಶಕದಿಂದ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಹಲವು ಕಲೆಗಳಿಗೆ ವೇದಿಕೆ ಕಲ್ಪಿಸುತ್ತಿರುವ ಈ ಸಂಸ್ಥೆ, ನಾಲ್ಕು ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹಾಗೂ ಗಿನ್ನೆಸ್ ದಾಖಲೆಯ ಗೌರವಕ್ಕೂ ಪಾತ್ರವಾಗಿದೆ.

ಪಟ್ಲ ಫೌಂಡೇಶನ್‌ನ ಜಿಲ್ಲಾ ಸಂಚಾಲಕರಾದ ನಗರ ರಾಘವೇಂದ್ರ ಅವರ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ವೇದಿಕೆಗೆ ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾಗವಹಿಸಿದ ಕಾಲೇಜುಗಳು:

ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾಳಕೊಪ್ಪದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ರಿಪ್ಪನ್‌ಪೇಟೆ ಹಾಗೂ ಕೋಣಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಆನಂದಪುರದ ಸಾಧನಾ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಈ ತಂಡದಲ್ಲಿದ್ದರು.

ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಿ ಪರಿಚಯಿಸಿದ ಮಲೆನಾಡಿನ ಯುವ ಪ್ರತಿಭೆಗಳ ಈ ಸಾಧನೆ ಇಡೀ ರಾಜ್ಯವೇ ಹೆಮ್ಮೆಪಡುವಂತೆ ಮಾಡಿದೆ. ಅತಿಥಿ ಕಲಾವಿದರಿಗೆ ಸೂಕ್ತ ಆತಿಥ್ಯ ನೀಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಗುಜರಾತ್ ಸರ್ಕಾರದ ವ್ಯವಸ್ಥೆಯೂ ಶ್ಲಾಘನೆಗೆ ಪಾತ್ರವಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]