ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ; ಡಿಡಿಪಿಐ ಚಂದ್ರಪ್ಪ ಗುಂಡಪಲ್ಲಿ

Written by Mahesha Hindlemane

Published on:

ಹೊಸನಗರ ; ಇಂದಿನ ಶೈಕ್ಷಣಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಒಲವು ತೋರಿಸಿದ್ದಲ್ಲಿ ಮುಂದಿನ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಶಿವಮೊಗ್ಗ ಡಿಡಿಪಿಐ ಚಂದ್ರಪ್ಪ ಗುಂಡಪಲ್ಲಿಯವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಆರ್ಯಈಡಿಗರ ಸಭಾಭವನದ ಆವರಣದಲ್ಲಿ ಹೊಸನಗರ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಶುಭಾರಂಭ  ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಅರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಇರುತ್ತದೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ಅಂಕ ಪಡೆದು ಮುಂದಿನ ತಮ್ಮ ಭವಿಷ್ಯದ ಕಡೆಗೆ ಚಿಂತಿಸಬೇಕಾಗಿದೆ ಈ ವಯಸ್ಸಿನ ಕಾಲಘಟ್ಟದಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಹರಿಸುವುದನ್ನು ಬಿಟ್ಟು ಮೊಬೈಲ್ ಅಥವಾ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಿದರೆ ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಮಧು ಬಂಗಾರಪ್ಪನವರು ಶಿಕ್ಷಣ ಸಚಿವರಾದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪದವಿ ಪೂರ್ವ ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಎಂ.ಪಿ ಸುರೇಶ್‌ ಈ ಸಂದರ್ಭದಲ್ಲಿ ಮಾತನಾಡಿ, ಎರಡ್ಮೂರು ವರ್ಷಗಳಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣರ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗುತ್ತಿದೆ. ನೂತನವಾಗಿ ಕಾಲೇಜಿನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಉತ್ತಮ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಭೋದಿಸುತ್ತಿದ್ದಾರೆ. ಗಣನೀಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ ಮುಂದಿನ ದಿನದಲ್ಲಿ ಈ ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಎಲ್ಲರೂ ಶ್ರಮಿಸುತ್ತಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾಲೇಜಿನ ಬಗ್ಗೆ ಕೈಜೋಡಿಸಬೇಕು ಮತ್ತು ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಪಾಲಿಸಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನವಾಗಿ ಆಗಮಿಸಿದ ಶ್ರೀನಿವಾಸ್ ನಾಯ್ಕ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ಯಾವ ರೀತಿ ವರ್ತಿಸುತ್ತಾರೊ ಅದೇ ರೀತಿ ಅವರೊಂದಿಗೆ ನಾವಿರುತ್ತೇವೆ ನಾವು ಇಲ್ಲಿಗೆ ಬಂದಿರುವುದು ವಿದ್ಯಾರ್ಥಿಗಳಿಗೆ ಓದು ಕಲಿಸಲು ತಾವು ಓದಿ ಮುಂದೆ ದೊಡ್ಡ-ದೊಡ್ಡ ಹುದ್ದೆ ಅಲಂಕರಿಸಿದರೇ ನಮಗೂ ಹಾಗೂ ಕಾಲೇಜಿಗೂ ಒಳ್ಳೆಯ ಹೆಸರು ಪಡೆದಂತಾಗುತ್ತದೆ. ಪ್ರತಿಯೊಬ್ಬರು ಓದಿ ದೊಡ್ಡ-ದೊಡ್ಡ ಹುದ್ದೆ ಅಲಂಕರಿಸಿ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಸಿಡಿಸಿ ಸದಸ್ಯರಾದ ರುದ್ರೇಶ್, ಚಂದ್ರಶೇಖರ್, ಲತಾ, ಲಕ್ಷ್ಮಿ, ಕೃಷ್ಣಮೂರ್ತಿ, ಉಪನ್ಯಾಸಕರಾದ ಸ್ವಾಮಿರಾವ್ ದಾಮೋದರ್ ಶಣೈ, ಸೀಮಾ, ಅಶೋಕ್‌ಕುಮಾರ್, ಕೆ.ಟಿ ಶ್ರೀಧರ್, ಗಣಪತಿ, ರವಿಕುಮಾರ್, ಡೆಲ್ವಿನ್, ರವಿ, ಶಿವಕುಮಾರ್, ರೂಪ, ಸುಮಾ, ತೇಜಸ್ವಿನಿ, ಮೇಘನಾ, ನಿಖಿತ, ಮಾಂತೇಶ್, ಸಂತೋಷ್, ಆದಿತ್ಯ, ಶಾಂತಲ ಟೀಕೇಶ್, ಪ್ರವೀಣ್, ಗೌರಮ್ಮ ಹಾಗೂ ಲೀನಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕೊಡಚಾದ್ರಿ ಕಾಲೇಜಿನ ಉಪನ್ಯಾಸಕ ಶ್ರೀಪತಿ ಹಳಗುಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

Leave a Comment