ತೀರ್ಥಹಳ್ಳಿ : ಕೃಷಿ ಸಮ್ಮೇಳನ, ಉದ್ಯೋಗ, ಆರೋಗ್ಯ ಮೇಳ, ಕಲಾ ಪ್ರದರ್ಶನ, ಮ್ಯೂಸಿಕ್ ನೈಟ್ಸ್, ಡಾನ್ಸ್ ಎಕ್ಸ್‌ಪ್ರೆಸ್, ಕಾಮಿಡಿ ಶೋ ಒಳಗೊಂಡ ಮೂರು ದಿನಗಳ ಮಲ್ನಾಡೋತ್ಸವ ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಆವರಣದಲ್ಲಿ ಮೇ 10, 11, 12ರಂದು ನಡೆಯಲಿದೆ ಎಂದು ಆಯೋಜಕ ತ.ರಾ.ರಾಘವೇಂದ್ರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಬೆಂಗಳೂರು, ಮಂಗಳೂರು ಸೇರಿ ರಾಜ್ಯದ 80ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಈಗಾಗಲೇ 1200ಕ್ಕೂ ಹೆಚ್ಚು ಯುವಕ, ಯುವತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಹೊಸದಾಗಿ ಉದ್ಯೋಗ ಅರಸುವವರಿಗೆ ಉತ್ತಮ ಮಾರ್ಗದರ್ಶನ, ಸಂದರ್ಶನದ ಕೌಶಲ ಹೆಚ್ಚಿಸಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಸಮ್ಮೇಳನದಲ್ಲಿ ಕೃಷಿ ಯಂತ್ರೋಪಕರಣ, ಕೃಷಿ ಪದಾರ್ಥ ಮಾರಾಟ, ಸಂವಾದ, ಸಾಧಕರಿಗೆ ಗೌರವ, ಆಹಾರ ಸ್ಟಾಲ್, ವಿಶೇಷ ಖಾದ್ಯ, ಕಾರು, ಬೈಕ್, ಟ್ರ್ಯಾಕ್ಟರ್, ಆಟೊ ಮಾಹಿತಿ, ವಿಶೇಷ ಮೀನು ಪ್ರದರ್ಶನ, ಆಟಿಕೆ, ಬಟ್ಟೆ, ಪ್ಯಾಷನ್ ವಸ್ತುಗಳ ಪ್ರದರ್ಶನ, ಗುಡಿ ಕೈಗಾರಿಕೆ, ಚಿತ್ರಕಲೆ, ವ್ಯಂಗ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೇ 10ರ ಸಂಜೆ ಗಾಯಕಿ ಸಾದ್ವಿನಿ ಕೊಪ್ಪ ಮತ್ತು ದಿಯಾ ಹೆಗ್ಡೆ ಹಾಡಿನ ಜೋಡಿಯೊಂದಿಗೆ ಮ್ಯೂಸಿಕ್ ನೈಟ್ಸ್, 11ರಂದು ಅರೆಹೊಳೆ ಪ್ರತಿಷ್ಠಾನ ಹಾಗೂ ಮಂಗಳೂರಿನ ನಂದಗೋಕುಲ ತಂಡದಿಂದ ಮಾರಣಕಟ್ಟೆ ಮಹಾತ್ಮೆ ಬಿಂಬಿಸುವ ‘ಬಿಡುವನೇ ಬ್ರಹ್ಮಲಿಂಗ’ ನೃತ್ಯ ರೂಪಕ ನಡೆಯಲಿದೆ. 12ರಂದು ಕುಂದಾಪುರ ಕುಳ್ಳಪ್ಪು ತಂಡದಿಂದ ‘ಗಿರಾಕಿಯೇ ಇಲ್ಲ ಮರಾಯ’ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.