ಹೊಸನಗರ

ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸಾಂಪ್ರದಾಯಿಕ ದಿನಾಚರಣೆ

ಹೊಸನಗರ ; ಭಾರತ ದೇಶವು ಪುರಾತನವಾದುದು, ಇಲ್ಲಿನ ಸಂಪ್ರದಾಯಗಳು ವಿಭಿನ್ನ ಮತ್ತು ವಿಶೇಷವಾಗಿದ್ದರೂ ಮೂಲದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿದೆ. ಹಾಗೆಯೇ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಹಿನ್ನೆಲೆಯಿಂದ ಬಂದಿದ್ದರೂ ಸಹ, ಇಲ್ಲಿ ಬಂದ ಮೇಲೆ ನಾವೆಲ್ಲ ಒಂದೇ ಎಂಬುದು ನಮ್ಮ ಮನದಲ್ಲಿ ಸದಾ ಜಾಗೃತವಾಗಿರಬೇಕು ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಕೆ. ಉಮೇಶ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಉಡುಗೆ ತೊಡಿಗೆಗಳು ಹಿಂದಿನ ಸಂಪ್ರದಾಯದಂತೆ ಇದ್ದರೇ ನೋಡಿಗರಿಗೂ ನಮಗೂ ಚಂದ ಅದನ್ನು ಬಿಟ್ಟು ಇಂದಿನ ಫ್ಯಾಶನ್‌ಗೆ ಹೋದರೆ ಮುಂದಿನ ದಿನದಲ್ಲಿ ತುಂಬಾ ಕಷ್ಟಕರವಾಗಲಿದೆ ಅದರಲ್ಲೂ ವಿದ್ಯಾರ್ಥಿನೀಯರು ಮೈತುಂಬಾ ಬಟ್ಟೆ ಅಥವಾ ಸೀರೆಗಳನ್ನು ಉಟ್ಟರೇ ಚಂದ ಎಂದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಶ್ರೀ ಮತಿ ಮೇದಿನಿ ಕೆಸವಿನಮನೆ ಮಾತನಾಡಿ, ಸಂಪ್ರದಾಯ ಎಂದರೆ ನಮ್ಮತನ, ಅದನ್ನು ಮತ್ತೆ ಮತ್ತೆ ಜಾಗೃತಗೊಳಿಸಲು ಇಂತಹ ದಿನಗಳು ಸಹಕಾರಿಯಾಗಿವೆ. ಆಧುನಿಕತೆಯ ಭರದಲ್ಲಿ ಎಂದೋ ಮರೆತ ಅಡುಗೆ, ಉಡುಗೆ, ತೊಡುಗೆಗಳು ಈ ನೆಪದಲ್ಲಿ ಹೊರಬರುತ್ತಿರುವುದು ಸಂತಸದ ವಿಚಾರ, ನಮ್ಮತನವನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತೀಯ ಉಡುಗೆ ತೊಡುಗೆಗಳನ್ನು ಧರಿಸಿ ವೈವಿದ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಿದರು. ಜಾನಪದ ನೃತ್ಯ, ಗೀತೆ, ಹಾಗೂ ಆಹಾರ ಮೇಳವನ್ನು ಏರ್ಪಡಿಸಿ ಸ್ಪರ್ಧೆ ನಡೆಸಿದರು. ವೈವಿಧ್ಯಮಯ ಉಡುಪು ಧರಿಸಿ ಪ್ರದರ್ಶನ ನಡೆಸಿದರು.

ಐಕ್ಯೂಎಸಿ ಚಾಲಕರಾದ ಮಂಜುನಾಥ ಡಿ, ಗ್ರಂಥಾಪಾಲಕರಾದ ಡಾ|| ಲೋಕೇಶ್, ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನವನ್ನು ಅರ್ಥ ಪೂರ್ಣವನ್ನಾಗಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]