ಹೊಸನಗರ ; 3ನೇ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನ ಪಥ ಸಂಚಲನದಲ್ಲಿ ಭಾಗವಹಿಸಲು ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದ CRPF ಯೋಧೆ ಕು. ಚಾಂದಿನಿ ಅವರ ಪೋಷಕರಾದ ಧರ್ಮಪ್ಪ ದಂಪತಿಗಳನ್ನು ಸ್ವಾಮಿ ವಿವೇಕಾನಂದ ಯುವ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಸ್ವಾಮಿ ವಿವೇಕಾನಂದ ವೇದಿಕೆ ಸಂಚಾಲಕ ನಗರ ನಿತಿನ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಮಂಡ್ರಿ ಪ್ರಮುಖರಾದ ಗಣಪತಿ ಬೆಳಗೋಡು, ಶ್ರೀಧರ್ ಚಿಕ್ಕನಕೊಪ್ಪ, ಮಂಜುನಾಥ್, ರಾಘವೇಂದ್ರ , ವಿಕ್ರಂ ಭಟ್, ಸಚಿನ್, ಗೋವರ್ಧನ್, ಪ್ರಮೋದ್, ಸುಮುಖ್, ಬೋಜಪ್ಪ, ವಸಂತ್ ಹಾಗೂ ಸಂಘಟನೆಯ ಇತರರು ಇದ್ದರು.