ತುಂಗಾ ಜಲಾಶಯದಿಂದ ನದಿಗೆ 37,000 ಕ್ಯೂಸೆಕ್ ನೀರು ಬಿಡುಗಡೆ !

Written by Koushik G K

Updated on:

Tunga Dam:ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಡ್ಯಾಮ್ ಮುಂಗಾರು ಮಳೆಯ ಪ್ರಭಾವದಿಂದ ಪೂರ್ಣವಾಗಿದ್ದು, ಇದರ ಫಲವಾಗಿ 37,000 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. 22 ಗೇಟ್‌ಗಳನ್ನು ತೆರೆದು, ನದಿಗೆ ನೀರು ಹರಿಸಲಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸುಮಾರು 31,000 ಕ್ಯೂಸೆಕ್‌ ಒಳ ಹರಿವು ಹೊಂದಿರುವ ತುಂಗಾ ಜಲಾಶಯವು ಈಗ ಭರ್ತಿಯಾಗಿದ್ದು, 37,000 ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ಜಲಾಶಯದ ಎಲ್ಲಾ ಗೇಟುಗಳನ್ನು ತೆರೆದಿಡಲಾಗಿದೆ, ಮತ್ತು ಹೆಚ್ಚಿನ ನೀರಿನ ಹರಿವು ಆರಂಭಗೊಂಡಿದೆ.

ಮಳೆ ತೀವ್ರತೆಯು ಹೆಚ್ಚಾಗಿ, ಶೃಂಗೇರಿ, ಕಿಗ್ಗ, ತೀರ್ಥಹಳ್ಳಿ ಮತ್ತು ಇತರೆ ಜಲಾನಯನ ಪ್ರದೇಶಗಳಲ್ಲಿ ತುಂಗಾ ನದಿಗೆ ಒಳ ಅರಿವು ಹೆಚ್ಚಾಗಿದ್ದು,ನೀರಿನ ಹರಿವನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಹವಮಾನ ಇಲಾಖೆ ವರದಿ ಪ್ರಕಾರ, ಮಳೆಯ ಆರ್ಭಟ ಮುಂದಿನ 6 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ, ಇದರಿಂದ ಜೋಗ ಜಲಪಾತವು ಇನ್ನೂ ಮೈದುಂಬಿ ಹರಿಯುವ ಸಾಧ್ಯತೆ ಇದೆ. ಇನ್ನು ಲಿಂಗನಮಕ್ಕಿ ಜಲಾಶಯಕ್ಕೆ 39,961ಕ್ಯೂಸೆಕ್ ನೀರು ಹರಿದು ಬಂದಿದೆ.

Read More

Google Pay ಮತ್ತು PhonePe ಬಳಸುವವರಿಗೆ ಇಲ್ಲಿದೆ ಬಿಗ್ ಅಪ್ಡೇಟ್ !

ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಸರ್ಕಾರದಿಂದ ತಿಂಗಳಿಗೆ ₹1000! ಈಗಲೇ ಅರ್ಜಿ ಹಾಕಿ!

Leave a Comment