ಏ.14 ರಂದು ರಿಪ್ಪನ್‌ಪೇಟೆ ಗ್ರಾ.ಪಂ. ಸಭಾಂಗಣದಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಕ್ಯಾಂಪ್

Written by Mahesha Hindlemane

Published on:

ಹೊಸನಗರ ; ರಾಜ್ಯಾದ್ಯಂತ ಮತದಾರರ ಪಟ್ಟಿಯ ಮ್ಯಾಪಿಂಗ್/ಪ್ರೋಜೆನಿ ನಡೆಯುತ್ತಿದ್ದು ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ: 212, 215, 216, 217, 218, 219, 220 ರ   ಮತಗಟ್ಟೆಗಳಲ್ಲಿ ಪ್ರಗತಿ ಕಡಿಮೆಯಾಗಿದ್ದು, ಬಾಕಿ ಉಳಿದಿರುವ ಮ್ಯಾಪಿಂಗ್/ಪ್ರೊಜೆನಿ ಪೂರ್ಣಗೊಳಿಸಿ ಪ್ರಗತಿ ಸಾಧಿಸಲು ಏ. 14 ರಂದು ಬೆಳಗ್ಗೆ 10:30 ರಿಂದ 5:00 ಗಂಟೆವರೆಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮ್ಯಾಪಿಂಗ್ ಕ್ಯಾಂಪ್ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಭರತ್ ರಾಜ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಕ್ಯಾಂಪಿನಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿರುತ್ತಾರೆ. ಮ್ಯಾಪಿಂಗ್ ಮಾಡಿಸಲು ಬರುವ ಮತದಾರರು ತಾವು 2002ರಲ್ಲಿ ಮತದಾರರಾಗಿರುವ ಬಗ್ಗೆ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು, ಭಾಗಸಂಖ್ಯೆ ಹಾಗೂ ತಮ್ಮ ಕ್ರಮಸಂಖ್ಯೆ ಅಥವಾ ಒಂದು ವೇಳೆ 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದ್ದಲ್ಲಿ, ನಿಮ್ಮ ತಂದೆ-ತಾಯಿರವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ಅಥವಾ ಅಜ್ಜ-ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರಿನ (ಯಾವುದಾರರೂ ಸಂಬಂಧಿಸಿದ) ಮಾಹಿತಿಯೊಂದಿಗೆ ಹಾಜರಾಗಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಭರತ್ ರಾಜ್ ತಿಳಿಸಿದ್ದಾರೆ. 

Leave a Comment