ಮತದಾರರ ಪಟ್ಟಿ ಮ್ಯಾಪಿಂಗ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ; ಕಲಗೋಡು ರತ್ನಾಕರ್

Written by Mahesha Hindlemane

Published on:

ಹೊಸನಗರ ; ಕೇಂದ್ರ ಸರ್ಕಾರದ ಅನುಯಾಯಿಯಾಗಿ ಚುನಾವಣೆ ಆಯೋಗ ಓಟ್ ಮ್ಯಾಪಿಂಗ್ ಪರಿಷ್ಕರಣೆ ಕಾರ್ಯ ಕೈಗೊಂಡಿದ್ದು ಅದರಂತೆ ರಾಜ್ಯ ಸರ್ಕಾರಗಳಿಗೆ ಈಗಾಗಲೇ ತಿಳಿಸಲಾಗಿದ್ದು ಮತದಾರರ ಪಟ್ಟಿ ಮ್ಯಾಪಿಂಗ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಪ್ರಜಾಪ್ರಭುತ್ವ ಕಗ್ಗೂಲೆ ಮಾಡುತ್ತಿದೆ. ಮತದಾರರ ಒಂದು ವೋಟ್ ಮಿಸ್ ಆದರೂ ಚುನಾವಣೆ ಆಯೋಗ ಮತ್ತು ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಛೇರಿ)ದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಕೇಂದ್ರ ಚುನಾವಣೆ ಆಯೋಗ ದೇಶ, ರಾಜ್ಯಾದ್ಯಂತ ಕಂದಾಯ ಇಲಾಖೆ ಹಾಗೂ ಶಿಕ್ಷಕರ ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ನಡೆಸುತ್ತಿದೆ. ಈ ಮ್ಯಾಪಿಂಗ್‌ನಲ್ಲಿ 2002ರ ನಂತರ ಯಾರು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರೂ ಅವರ ವೋಟಿಂಗ್ ಪವರ್ ಅವರು ಮದುವೆಯಾದ ಸ್ಥಳದಿಂದಗಂಡನ ಮನೆಗೆ ವರ್ಗಾಯಿಸಬೇಕಾಗುತ್ತದೆ. ಇದರಿಂದ ಮತದಾರರಿಗೆ ಮ್ಯಾಪಿಂಗ್ ಮಾಡುವುದು ಕಷ್ಟಕರವಾಗಿದೆ. ಮದುವೆಯಾದವರು ಅವರು ಹುಟ್ಟಿ ಬೆಳೆದ ಸ್ಥಳದಿಂದ ಅಥವಾ ಹಿಂದೆ ಮತದಾನ ಮಾಡಿದ ಸ್ಥಳದಿಂದ ತಂದೆ-ಮಗಳ ಸಂಬಂಧದ ಬಗ್ಗೆ ಹಾಗೂ ಅಲ್ಲಿ ಮತದಾನ ಮಾಡಿದ ಚುನಾವಣೆ ಗುರುತಿನ ಚೀಟಿ ನಂಬರ್ ತರಬೇಕಾಗಿದೆ. ಇದರಿಂದ ಬಹಳ ಕಷ್ಟಕರವಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 5 ಕೋಟಿಯಷ್ಟು ಮತದಾರರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಅದರಲ್ಲಿ ಸುಮಾರು 40% ಮದುವೆಯಾದವರಿದ್ದೂ ಅವರಿಗೆ ಕಷ್ಟಕರವಾಗಿದೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಸರ್ಕಾರಿ ಅಧಿಕಾರಿಗಳ ಮೂಲಕ ಎಲ್ಲರೂ ಮ್ಯಾಪಿಂಗ್ ಮಾಡಿಸಬೇಕು ಎಂದರು.

ಈ ಮ್ಯಾಪಿಂಗ್ ಬಗ್ಗೆ ಪ್ರಚಾರ ನೀಡದೆ ಚುನಾವಣಾ ಆಯೋಗ ಸರ್ಕಾರಿ ಅಧಿಕಾರಿಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದು ಇದರ ಬಗ್ಗೆ ಪ್ರಚಾರ ನೀಡಬೇಕು ಹಾಗೂ ಮನೆ-ಮನೆಗೆ ಪ್ರಚಾರ ಮಾಡಬೇಕು. ಓರ್ವ ಮಹಿಳೆಯರ ವೋಟು ಮಿಸ್ ಆದರೂ ಕಾಂಗ್ರೆಸ್ ಪಕ್ಷ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಾವು ಮತ್ತು ನಮ್ಮ ಪಕ್ಷದ ವತಿಯಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಂಡು ಮತದಾರರಿಗೆ ವಿಷಯ ಮುಟ್ಟಿಸುತ್ತಿದ್ದು ಮತದಾರರು ತಾಲ್ಲೂಕಿನ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಮ್ಯಾಪಿಂಗ್ ಬಗ್ಗೆ ತಿಳಿದುಕೊಂಡು ಮ್ಯಾಪಿಂಗ್ ಮಾಡಿಸಿಕೊಳ್ಳಿ ಮುಂದಿನ ಚುನಾವಣೆಯಲ್ಲಿ ಒಂದು ವೋಟ್ ಮಿಸ್ ಆದರೂ ಚುನಾವಣೆ ಆಯೋಗ ಕೈಬಿಟ್ಟರೂ ಅದು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣೆ ಆಯೋಗವೇ ನೇರ ಹೊಣೆಯಾಗಿದ್ದು ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಅನಿವಾರ್ಯ ಎಂದರು.

ಈ ಪತ್ರಿಕಾಘೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಎಂ.ಪಿ ಸುರೇಶ್, ಬಾಳೆಕೊಪ್ಪ ಗಣೇಶ್, ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment