HOSANAGARA ; ಹಿಂಗಾರು ಮಳೆ ಅಬ್ಬರಕ್ಕೆ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದ ಬಸವಣ್ಣ ಎಂಬುವರ ಮನೆ ಗೋಡೆ ಕುಸಿತಗೊಂಡ ಘಟನೆ ನಡೆದಿದ್ದು ಯಾವುದೇ ಜೀವ ಹಾನಿಯಾಗಿಲ್ಲ.
ಹೊಸನಗರ ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಹಿಂಗಾರು ಮಳೆ ಅಬ್ಬರಿಸುತ್ತಿದ್ದು ಬಸವಣ್ಣನವರ ಮನೆ ಗೋಡೆ ಕುಸಿತಗೊಂಡಿದ್ದು ತಹಶೀಲ್ದಾರ್ ರಶ್ಮಿ ಹಾಲೇಶ್ ಆದೇಶದ ಮೇರೆಗೆ ಗ್ರಾಮ ಲೆಕ್ಕಾಧಿಕಾರಿ ಲೋಹಿತ್ ಸ್ಥಳ ಪರಿಶೀಲಿಸಿದ್ದಾರೆ.

ದಸಂಸದಿಂದ ಸ್ಥಳ ಪರಿಶೀಲನೆ :
ಹೊಸನಗರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರಳಸುರಳಿ ನಾಗರಾಜ್, ತಾಲ್ಲೂಕು ಸಂಚಾಲಕ ಕರಿನಗೊಳ್ಳಿ ಪ್ರಕಾಶ್ ಹಾಗೂ ಗಂಗನಕೊಪ್ಪ ಹರೀಶ್‌ರವರು ಗೋಡೆ ಕುಸಿತಗೊಂಡ ಬಸವಣ್ಣನವರ ಮನೆಗೆ ಭೇಟಿ ನೀಡಿದ್ದು ಬಸವಣ್ಣನವರು ಕಡುಬಡವರಾಗಿದ್ದು ಇರುವ ಒಂದು ಮನೆಯ ಗೋಡೆಯು ಕುಸಿತವಾಗಿರುವುದರಿಂದ ಇವರಿಗೆ ವಾಸ ಮಾಡಲು ಮನೆಯಿಲ್ಲ. ತಾಲ್ಲೂಕು ಆಡಳಿತ ಇವರ ನೆರವಿಗೆ ಆಗಮಿಸಿ ತಕ್ಷಣ ಸೂಕ್ತ ಪರಿಹಾರ ಕೊಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂದು ಕಂದಾಯ ಇಲಾಖೆಗೆ ಒತ್ತಾಯಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.