HOSANAGARA | ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ಭಾರಿ ಮಳೆ ಬೀಳುತ್ತಿದ್ದು ಜನರು ಸೂರ್ಯದೇವನನ್ನು ನೋಡದ ಪರಿಸ್ಥಿತಿಗೆ ತಲುಪಿದ್ದಾರೆ. ಹಗಲು-ರಾತ್ರಿ ಎನ್ನದೇ ಧೋ… ಎಂದು ಮಳೆ ಸುರಿಯುತ್ತಿದೆ. ಭಾಗಶಃ ಎಲ್ಲಾ ಹಳ್ಳ-ಕೊಳ್ಳಗಳು, ನದಿ, ಕೆರೆಗಳು ತುಂಬಿ ಹರಿಯುತ್ತಿದೆ.
SHIVAMOGGA | ಮಳೆಯಿಂದ ಜಿಲ್ಲೆಯಲ್ಲಿ ಈವರೆಗೆ ಏನೆಲ್ಲ ಹಾನಿ ಸಂಭವಿಸಿದೆ ?
ಮಳೆಗೆ ಹೊಸನಗರ ತಾಲ್ಲೂಕಿನಲ್ಲಿ ಈವರೆಗೆ ಸಾಕಷ್ಟು ಅನಾಹುತಗಳು ನಡೆದಿದೆ. ಮಳೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ರಶ್ಮಿ ಹಾಲೇಶ್ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ರವರ ನೇತೃತ್ವದ ತಂಡ ತಮ್ಮ ಸಿಬ್ಬಂದಿಗಳೊಂದಿಗೆ ರೆವಿನ್ಯೂ ಅಧಿಕಾರಿಗಳೊಂದಿದೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
50 ಮನೆಗಳಿಗೆ ಹಾನಿ :
ತಾಲ್ಲೂಕಿನಲ್ಲಿ ಮಳೆಗೆ ಈವರೆಗೆ ಒಟ್ಟು 50 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು 2 ಮನೆಗಳು ಸಂಪೂರ್ಣ ಜಖಂಗೊಂಡಿವೆ. 48 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 9 ಜಾನುವಾರು ಕೊಟ್ಟಿಗೆಗಳು ಹಾನಿಯಾಗಿವೆ. ಒಂದು ಜಾನುವಾರು ಸಾವನ್ನಪ್ಪಿದ ವರದಿಯಾಗಿದೆ.
ಹೊಸನಗರ ತಾಲ್ಲೂಕಿನಲ್ಲಿ ನೆರೆ ಹಾವಳಿಯಿಂದ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಬೈಸೆ ಗ್ರಾಮದ ಶಶಿಕಲಾ ಮೃತಪಟ್ಟಿದ್ದಾರೆ. 19.82 ಕಿಲೋ ಮೀಟರ್ ಗ್ರಾಮೀಣ ರಸ್ತೆ ಹಾನಿಯಾಗಿದೆ. 14 ಸೇತುವೆಗಳು, 7 ಕೆರೆಗಳು, 3 ಶಾಲೆಗಳು, 3 ಸರ್ಕಾರಿ ಕಟ್ಟಡಗಳು ಹಾನಿಯಾಗಿರುವ ಬಗ್ಗೆ ಇಲ್ಲಿಯವರೆಗೆ ವರದಿಯಾಗಿದೆ ಎಂದು ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್ ಮಾಹಿತಿ ನೀಡಿದ್ದಾರೆ.
ಅರ್ಚಕರ ಹುದ್ದೆ ಖಾಲಿ ಇದೆ :
HOSANAGARA | ಹುಂಚ ಹೋಬಳಿಯ ಮುಜರಾಯಿ ದೇವಸ್ಥಾನವಾದ ಬಿಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರ ಹುದ್ದೆ ಖಾಲಿ ಇದ್ದು ಆಸಕ್ತರು ಜುಲೈ 26ರ ಒಳಗಾಗಿ ಹೊಸನಗರದ ತಾಲ್ಲೂಕು ಕಛೇರಿಗೆ ಅರ್ಜಿ ಸಲ್ಲಿಸಬಹುದೆಂದು ತಹಶೀಲ್ದಾರ್ ರಶ್ಮಿ ಹಾಲೇಶ್ ಅದೇಶದ ಮೇರೆಗೆ ಶಿರಾಸ್ಥೆದಾರ್ ಸುಧೀಂದ್ರಕುಮಾರ್ ತಿಳಿಸಿದ್ದಾರೆ.