ಹೊಸನಗರ ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕ ನೆರವು ಸಿಗುತ್ತಿದ್ದು ಅದರಲ್ಲಿಯೂ ಹೊಸನಗರದ ಮಲೆನಾಡು ಭಾಗದಲ್ಲಿ ಹಳ್ಳಿ ಗ್ರಾಮಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಕಷ್ಟ ಕಾಲದಲ್ಲಿ ಸರ್ಕಾರ ನೀಡುತ್ತಿರುವ 2000 ರೂಪಾಯಿಯ ಆರ್ಥಿಕ ಯೋಜನೆ ಫಲ ನೀಡಿದೆ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಹೆಚ್.ಬಿ.ಚದಂಬರ ಹೇಳಿದರು.
ಅವರು ತಾಲ್ಲೂಕು ಪಂಚಾಯತಿ ಪಕ್ಕದಲ್ಲಿರುವ ತಮ್ಮ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ಮಹಿಳೆಯರಿಗೆ ಜನಸಾಮಾನ್ಯರ ಆರ್ಥಿಕ ಸಾಮಾಜಿಕ ನೆರವಿಗೆ ಗ್ಯಾರಂಟಿ ಯೋಜನೆಗಳು ಫಲ ನೀಡುತ್ತಿದ್ದು ಮಹಿಳೆಯರಿಗೆ ಮತ್ತು ಯುವಜನತೆಗೆ ಆರ್ಥಿಕ ಬಲ ಸಿಕ್ಕಿದಂತಾಗಿದೆ ಮಹಿಳೆಯರು ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಕುಟುಂಬದ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು ಯಾಜಮಾನಿ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬವು ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದರು.
ಯುವನಿಧಿ ಯೋಜನೆ ಕುರಿತು ಮಾತನಾಡಿದ ಅವರು, ಪದವಿ ಪಡೆದ 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ ಅವರ ಮುಂದಿನ 24 ತಿಂಗಳ ಅವಧಿಗೆ ಮಾಸಿಕ ರೂಪಾಯಿ ಮೂರು ಸಾವಿರ ಹಾಗೂ ಡಿಪ್ಲೊಮಾ ಪೂರೈಸಿದ ಕನ್ನಡ ಪದವೀಧರರಿಗೆ ಮಾಸಿಕ ಒಂದೂವರೆ ಸಾವಿರ ನಿರುದ್ಯೋಗ ಭತ್ಯೆ ನೀಡುವುದು ಯುವನಿಧಿಯ ಉದ್ದೇಶವಾಗಿದೆ. ಆರು ತಿಂಗಳೊಳಗೆ ಉದ್ಯೋಗ ದೊರೆತಲ್ಲಿ ಅಥವಾ ಅರ್ಜಿ ಸಲ್ಲಿಸಿದ ಬಳಿಕ ನೌಕರಿ ಸಿಕ್ಕರೆ ಈ ಯೋಜನೆ ಅನ್ವಯಿಸುವುದಿಲ್ಲ ಅರ್ಹರಿಗೆ ಯೋಜನೆಯು ಎರಡು ವರ್ಷಗಳಿಗೆ ಮಾತ್ರ ಅನ್ವಯಿಸುತ್ತದೆ ಅರ್ಹರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಫಲಾನುಭವಿಯು ಬ್ಯಾಂಕ್ ಖಾತೆಗೆ ಹಣ ನೇರ ಸಂದಾಯ ಆಗಲಿದೆ ಎಂದರು.
ತಾಲ್ಲೂಕಿನಲ್ಲಿ ಈವರೆಗೆ ಗೃಹಲಕ್ಷ್ಮಿ ಯೋಜನೆಯ ಒಟ್ಟು 26,336 ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಎರಡು ಸಾವಿರದಂತೆ ₹ 5,26,72,000 ಹಣ ಬಿಡುಗಡೆಯಾಗಿದೆ ಈವರೆಗೆ ಗೃಹಜ್ಯೋತಿ ಯೋಜನೆಯ 32,369 ಫಲಾನುಭವಿಗಳು 26,75,66,814 ರೂಪಾಯಿ, ಶಕ್ತಿ ಯೋಜನೆಯಿಂದ 48,8441 ಮಂದಿಗೆ 52,76,21,922 ಯುವ ನಿಧಿ ಯೋಜನೆಯು 700 ಅರ್ಹ ಫಲಾನುಭವಿಗಳಿಗೆ 109,75,500 ರೂಪಾಯಿ ಹಾಗೂ 21,601 ಅನ್ನಭಾಗ್ಯ ಯೋಜನೆಯ ಫಲಾನುಭವಿಯಾಗಿದ್ದಾರೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.