ಹೊಸನಗರ ; ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಗಾಯತ್ರಿ ಮಂದಿರದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದನ್ಯಯ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಕೊಳವಳ್ಳಿ ಕೇಂದ್ರದ ಸಂಯೋಜಕಿ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ನಡೆಯಿತು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್ ಉದ್ಘಾಟಿಸಿ ಮಾತನಾಡಿ, ವರ್ಗಭೇದ ವರ್ಣಭೇದ ಆರ್ಥಿಕ ಅಂತಸ್ತು ಹೊರತುಪಡಿಸಿದ ಶ್ರೀ ಕ್ಷೇತ್ರದ ಸಂಘದ ಸೇವೆ ವರ್ಣಾತೀತವಾಗಿದೆ. ಇದು ಅನವರತ ಮುಂದುವರೆಯಲಿ ಎಂದು ಹರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆಯ ನಿರ್ದೇಶಕ ಎನ್.ಆರ್ ದೇವಾನಂದ, ಶ್ರೀ ಕ್ಷೇತ್ರದ ಯೋಜನೆಗಳ ಬಗ್ಗೆ ಎಲ್ಲ ವರ್ಗ ವರ್ಣದ ಜನರ ಭಾವನಾತ್ಮಕ ಸಂಬಂಧ ಯಾವುದೇ ಸಂಘ ಸಂಸ್ಥೆಗಳಿಗೆ ಸಾಟಿಯಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆ ಈವರೆಗೆ ತಾಲೂಕಿನ 2155 ಸಂಘಗಳಿಂದ 46.35 ಕೋಟಿ ರೂಪಾಯಿಗಳ ಲಾಭವನ್ನು ಹೊಂದಿದ್ದು ತಾಲೂಕಿನ ಮತ್ತಿಮನೆಯ ಶ್ರೀ ಗಜಾನನ ಸಂಘ, ಕುಸುಗುಂಡಿಯ ಶ್ರೀ ನೇತ್ರಾವತಿ ಸಂಘ, ಇಟ್ಟಕ್ಕಿ ತೊಗರೆಯ ಶ್ರೀ ಮಂಜುನಾಥ ಸಂಘ ಸೇರಿದಂತೆ ಲಾಭಾಂಶ ಗಳಿಸಿದ ಮಹಿಳಾ ಸ್ವಸಹಾಯ ಸಂಘಗಳಿಗೆ ಚೆಕ್ ಗಳನ್ನು ವಿತರಿಸಿದರು.
ಕರ್ತವ್ಯವೇ ದೇವರೆಂದು ವಿವಿಧ ಕ್ಷೇತ್ರಗಳಲ್ಲಿ ಕಾಯಕ ಎಸಗಿದ ಸಾಧಕ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ನಿಟ್ಟೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್ ಗಣೇಶ್, ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಬಳಕೆಯಿಂದ ಉಂಟಾಗುವ ಸಾಧಕ ಬಾದಕಗಳ ಬಗ್ಗೆ ಮಾಹಿತಿ ನೀಡಿದರು.
ಜ್ಞಾನ ವಿಕಾಸ ಯೋಜನಾಧಿಕಾರಿ ರತ್ನ ಮೈಪಾಳ್ ಜ್ಞಾನ ವಿಕಾಸ ಕೇಂದ್ರದ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿ ಎಲ್ಲರೂ ಸಂಘಟಿತರಾಗುವ ಮೂಲಕ ಸ್ತ್ರೀ ಶಕ್ತಿ ಕೈ ಬಲಪಡಿಸಬೇಕೆಂದರು.
ಸಮಗೋಡು ಸಮೃದ್ಧಿ ಕೇಂದ್ರದ ಸುಮಾ ಸುಳುಗೋಡು, ಶ್ರೀ ವಿದ್ಯಾ ಕೇಂದ್ರದ ಆಸ್ಮಾ ಸಂಘದ ಸದಸ್ಯತ್ವ ಹೊಂದಿದ ಮೇಲೆ ತಮ್ಮ ಕುಟುಂಬದ ಸ್ಥಿತಿಗತಿ ಹೊಂದಿದ ಬಗ್ಗೆ ತಮ್ಮ ಅನಿಸಿಕೆಯನ್ನು ಗೋಷ್ಟಿಗೆ ತಿಳಿಸಿದರು.
ಸೇವಾ ಪ್ರತಿನಿಧಿ ಸುನಿತಾ ಪ್ರಾರ್ಥಿಸಿದರು. ಮೇಲ್ವಿಚಾರಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಆರ್ ಪ್ರದೀಪ್ ಪ್ರಾಸ್ತಾವಿಕ ನುಡಿ ನಂತರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಂಗೋಲಿ, ಪುಷ್ಪಗುಚ್ಚ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ ಅಭಾರ ಮನ್ನಿಸಿದರು.