Post Office Scheme: ಅಂಚೆ ಕಚೇರಿಗಳಲ್ಲಿ ಈಗ ನಿಮ್ಮ ಭವಿಷ್ಯವನ್ನು ಭದ್ರಗೊಳಿಸುವ ಶ್ರೇಷ್ಠ ಅವಕಾಶವಿದೆ. ಕೇವಲ ₹50 ಪ್ರಾರಂಭಿಕ ಹೂಡಿಕೆಯಿಂದ ನಿವೃತ್ತಿ ಸಮಯದಲ್ಲಿ ನೀವು ₹30 ಲಕ್ಷವರೆಗೆ ಲಾಭ ಪಡೆಯಬಹುದಾದ “ಗ್ರಾಮ ಸುರಕ್ಷಾ ಯೋಜನೆ” ಎಂಬ ಅಚ್ಚರಿಯ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಈ ಯೋಜನೆಯನ್ನು ಭಾರತ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ಉದ್ದೇಶಿಸಿ ಪರಿಚಯಿಸಿದ್ದು, ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯುವ ಅವಕಾಶವಿದೆ. ಈ ಯೋಜನೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ನಿವೃತ್ತಿ ಪಿಂಚಣಿಗಾಗಿ ತುಂಬಾ ಲಾಭದಾಯಕವಾಗಿದೆ.
ಯೋಜನೆಯ ಪ್ರಮುಖ ಅಂಶಗಳು:
- ಹೂಡಿಕೆಗೆ ಪ್ರಾರಂಭಿಕ ಮೊತ್ತ: ಕೇವಲ ₹50 ರಿಂದ ₹150 ತನಕ.
- ಈ ಮೊತ್ತ ವಯಸ್ಸು ಮತ್ತು ನಿವೃತ್ತಿ ಗುರಿಯನ್ನು ಆಧರಿಸಿ ಬದಲಾಗುತ್ತದೆ.
- 25 ವರ್ಷದ ವ್ಯಕ್ತಿ 60ನೇ ವರ್ಷದಲ್ಲಿ ₹2 ಲಕ್ಷ ವಿಮಾ ಲಾಭ ಪಡೆಯಲು ಪ್ರತಿ ತಿಂಗಳು ₹400-₹450 ಪಾವತಿಸಬೇಕಾಗುತ್ತದೆ.
- ಯೋಜನೆಯ ನಿವೃತ್ತಿ ವಯಸ್ಸು: 55 ರಿಂದ 60 ವರ್ಷಗಳ ನಡುವಿನ ಯಾವುದೇ ವಯಸ್ಸನ್ನು ಆಯ್ಕೆ ಮಾಡಬಹುದು.
- ನಿವೃತ್ತಿಯಾದ ಮೇಲೆ ನಿಯಮಿತ ಪಿಂಚಣಿ ಲಭ್ಯವಿರುತ್ತದೆ.
- ಈ ಯೋಜನೆ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಸರಳ ದಾಖಲೆ ಮತ್ತು ಪ್ರಕ್ರಿಯೆಯಿಂದ ಸುಲಭವಾಗಿ ಸೇರಿಸಿಕೊಳ್ಳಬಹುದು.
ಯಾರು ಸೇರ್ಪಡೆಗೊಳ್ಳಬಹುದು?
ಹೆಚ್ಚಿನ ಆದಾಯವಿಲ್ಲದವರಿಂದ ಹಿಡಿದು ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಗ್ರಾಮೀಣ ಭಾಗದ ಜನತೆಗೆ ಇದೊಂದು ನಿಜವಾದ ಭದ್ರತಾ ಜಾಲವಾಗಿ ಪರಿಣಮಿಸಲಿದೆ.
ಕಡಿಮೆ ಹೂಡಿಕೆಯೊಂದಿಗೆ ಭವಿಷ್ಯವನ್ನು ಭದ್ರಗೊಳಿಸಲು ನೀವು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಯೋಜನೆಯಿಂದ ಒಳ್ಳೆಯ ಅವಕಾಶಗಳನ್ನ ಪಡೆದುಕೊಳ್ಳಿ. ಈಗಲೇ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆಯಿರಿ.
ಮರಣದ ನಂತರ ನಾಮಿನಿಗೆ ಸಂಪೂರ್ಣ ಹಣ!
ಈ ಯೋಜನೆಯ ಮುಖ್ಯ ಆಕರ್ಷಣೆ ಏನೆಂದರೆ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪೂರ್ಣ ವಿಮಾ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಇದು ಸಂಪೂರ್ಣವಾಗಿ ಒಂದು ಜೀವ ವಿಮಾ ಯೋಜನೆಯಂತೆ ಕಾರ್ಯನಿರ್ವಹಿಸುತ್ತದೆ. ಕುಟುಂಬದ ಭದ್ರತೆಗೆ ಇದು ನಿಜಕ್ಕೂ ಮಹತ್ವಪೂರ್ಣ ಸಾಧನವಾಗಬಹುದು.
ಇದೆಲ್ಲದರ ಜೊತೆಗೆ, ಈ ಯೋಜನೆಯ ಮೂಲಕ ಅಥವ 35 ಲಕ್ಷ ರೂ.ಗಳವರೆಗೆ ಮೆಚ್ಯೂರಿಟಿ ಮೊತ್ತ ಪಡೆಯಬಹುದಾಗಿದೆ. ಇದು ಹಣಕಾಸು ಭದ್ರತೆಗಾಗಿ ಅತ್ಯುತ್ತಮ ಯೋಜನೆಯೆಂದು ಪರಿಗಣಿಸಲಾಗಿದೆ.
ಹೀಗೆ ನೋಂದಾಯಿಸಿಕೊಳ್ಳಿ:
ಈ ಯೋಜನೆಗೆ ಸೇರಬೇಕಾದರೆ, ನಿಮಗೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವುದು ಅಗತ್ಯ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಜೊತೆಗೆ ತರಬೇಕು:
- ಆಧಾರ್ ಕಾರ್ಡ್
- ವಿಳಾಸ ಪುರಾವೆ (Address Proof)
- ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
ಇವುಗಳನ್ನು ನೀಡಿದ ಬಳಿಕ, ನೀವು ಅಂಚೆ ಅಧಿಕಾರಿಗಳ ಸಹಾಯದಿಂದ ಈ ಯೋಜನೆಗೆ ಸರಿ ಹೊಂದುವಂತೆ ಪ್ರೀಮಿಯಂ ಆಯ್ಕೆಮಾಡಿ, ನಿಮಗಿಷ್ಟವಾದ ವಿಮಾ ರಕ್ಷಣೆ ಪಡೆಯಬಹುದು.
Read More :ಕಡಿಮೆ ಹೂಡಿಕೆಯಿಂದ ಅಧಿಕ ಲಾಭದ ಕೋಳಿ ಸಾಕಾಣಿಕೆ ವ್ಯವಹಾರ – ಪ್ರತಿ ತಿಂಗಳು ₹30,000 ಗಳಿಸುವ ವಿಧಾನ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650