ಡಿಕ್ಕಿಯಾದ ರಭಸಕ್ಕೆ ಕಾರಿನ ಮೇಲೆಯೇ ಪಲ್ಟಿಯಾದ ಖಾಸಗಿ ಬಸ್, ಅಪ್ಪಚ್ಚಿಯಾದ ಕಾರು ಚಾಲಕ !

Written by malnadtimes.com

Updated on:

SHIKARIPURA | ಕಾರು-ಖಾಸಗಿ ಬಸ್ ಮುಖಾಮುಖಿ (Accident) ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಶಿಕಾರಿಪುರ ತಾಲ್ಲೂಕು ದೇವಿಕೊಪ್ಪ ಸಮೀಪ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now

ಆನವಟ್ಟಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಶಿರಾಳಕೊಪ್ಪದ ಕಡೆದಿಂದ ಹೋಗುತ್ತಿದ್ದ ಕಾರು ಡಿಕ್ಕಿಯಾದ ರಭಸಕ್ಕೆ ಬಸ್‌ ಪಲ್ಟಿಯಾಗಿ ರಸ್ತೆ ಮೇಲೆಯೇ ಉರುಳಿ ಬಿದ್ದಿದೆ. ಹೀಗೆ ಬಿದ್ದ ಬಸ್‌ ಕಾರಿನ ಮೇಲೆಯೇ ಬಿದ್ದಿದ್ದರಿಂದ ಸ್ಥಳದಲ್ಲಿಯೇ ಕಾರು ಚಾಲಕ ಬಸವಪ್ಪ ಎಂಬುವವರು ಸಾವನ್ನಪ್ಪಿದ್ದಾರೆ.

ಇನ್ನೂ ಬಸ್‌ನಲ್ಲಿದ್ದ ಪ್ರಯಾಣಿಕರು ಸಹ ಗಾಯಗೊಂಡಿದ್ದು, ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪ್ರಯಾಣಿಕರನ್ನ ಸುರಕ್ಷಿತವಾಗಿ ಬಸ್‌ನಿಂದ ಹೊರಕ್ಕೆ ಕರೆತಂದಿದ್ದಾರೆ.

ಬಸ್‌ನ ಕಿಟಕಿಯ ಗಾಜುಗಳನ್ನು ಒಡೆದು ಅದರಿಂದ ಪ್ರಯಾಣಿಕರನ್ನ ಹೊರಕ್ಕೆ ಕರೆತಂದಿದ್ದಾರೆ.

Leave a Comment