ಹೊಸನಗರ ಮಾರಿಜಾತ್ರೆಯ ಹಾಗೂ ದೇವಸ್ಥಾನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪೋಸ್ಟ್ ; ತಕ್ಷಣ ಕ್ರಮ ಕೈಗೊಳ್ಳಲು ಪಿಎಸ್ಐಗೆ ಮನವಿ

0
1098

ಹೊಸನಗರ: ಇಲ್ಲಿನ ಮಾರಿಕಾಂಬ ದೇವಸ್ಥಾನದಲ್ಲಿ ಮಾರ್ಚ್ 15ರಿಂದ 23ರವರೆಗೆ ಅದ್ಧೂರಿಯಾಗಿ ಮಾರಿಜಾತ್ರೆ ನಡೆಯುತ್ತಿದ್ದು ಜಾತ್ರಾ ಕಮಿಟಿಯ ವತಿಯಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆದರೆ ಕೆಲವು ಕಿಡಿಗೇಡಿಗಳು ದೇವಸ್ಥಾನದ ಬಗ್ಗೆ ಹಾಗೂ ಮನೋರಂಜನೆ ಕಾರ್ಯಕ್ರಮಗಳ ಬಗ್ಗೆ ಹಾಗೂ ಕಮಿಟಿಯ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹರಿಬಿಡುತ್ತಿರುವವರನ್ನು ಬಂಧಿಸಬೇಕೆಂದು ಜಾತ್ರಾ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್‌ರವರ ನೇತೃತ್ವದ ತಂಡ ಹೊಸನಗರದ ಸಬ್‌ಇನ್ಸ್ಪೇಕ್ಟರ್ ರಾಜೇಂದ್ರನಾಯಕ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರದಲ್ಲಿ ಜಾತ್ರೆಯ ಪ್ರಯುಕ್ತ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕೆಲವು ಕಿಡಿಗೇಡಿಗಳು ಪ್ರಚೋದನಾಕಾರಿಯಾಗಿ ದೇವರ ಬಗ್ಗೆ ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿ ಸಾಮಾಜಿಕವಾಗಿ ನಮ್ಮ ಮನಸ್ಸನ್ನು ದುರ್ಬಲ ಮಾಡುವಂತೆ ಹಾಗೂ ನೋವುಂಟು ಮಾಡಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಅಪಪ್ರಚಾರ ಪಡಿಸುತ್ತಿದ್ದು ಹಾಗೂ ಸಾರ್ವಜನಿಕರಿಗೆ ಈ ದೇವಸ್ಥಾನದ ಭಕ್ತರಿಗೆ ಧಾರ್ಮಿಕವಾಗಿ ಮನಸ್ಸಿಗೆ ಘಾಸಿ ಉಂಟು ಮಾಡಿದ್ದು ಈ ಬಗ್ಗೆ ಕಿಡಿಗೇಡಿಗಳನ್ನು ಕರೆಸಿ ವಿಚಾರಿಸಬೇಕೆಂದು ಹಾಗೂ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಖಾಜಾಂಚಿಯಾದ ಪಿ ಮನೋಹರ್, ಸದಸ್ಯರಾದ ದತ್ತಾತ್ರೇಯ, ವಿಜೇಂದ್ರ, ನಿತ್ಯಾನಂದ, ಕುಮಾರ ಗೌಡ, ಗೋಪಾಲ್ ಗೋಪಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here