Lokasabha Election | ಈ ಬಾರಿ ಜಯಪ್ರಕಾಶ್‌ಹೆಗ್ಡೆಗೆ ಅವಕಾಶ ಮಾಡಿಕೊಟ್ಟಲ್ಲಿ ಗೆಲುವು ; ಜಮೀಲ್

0 235

ಚಿಕ್ಕಮಗಳೂರು : ಸುಳ್ಳನ್ನು ಬಂಡವಾಳ ಮಾಡಿಕೊಂಡು ಜಿಲ್ಲೆಯ ಜನತೆಗೆ ಮಂಕುಬೂದಿ ಎರಚುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಜನತೆ ಪುಟಿದೇಳುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಎಎಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್ ಹೇಳಿದ್ದಾರೆ.


ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಒಕ್ಕೂಟದ ಪ್ರಕಾರ ಜಯಪ್ರಕಾಶ್ ಹೆಗ್ಡೆ ಉತ್ತಮ ಅಭ್ಯರ್ಥಿಯಾದರೆ ಮಾತ್ರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಖಚಿತವಾಗಿ ಉತ್ತಮ ಆಡಳಿತ ನೀಡುವವರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕೇಂದ್ರ ಮಂತ್ರಿಯಾಗಿ ಶೋಭಾ ಕರಂದ್ಲಾಜೆ ಕಳೆದ ಐದು ವರ್ಷಗಳ ಹಿಂದೆ ಯಾವುದೇ ಜನಾಭಿವೃಧ್ದಿ ಕೆಲಸ ಮಾಡಿಲ್ಲ. ಎಷ್ಟು ಅನುದಾನ ಬಂದಿದೆ. ಯಾವ ಕಾಮಗಾರಿಗಳಾಗಿವೆ ಎಂಬುದು ಜನತೆಗೆ ತಿಳಿಸಬೇಕು. ತಮಗೆ ತಿಳಿದಂತೆ ಸಂಸದರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಾಗಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡುವ ಮೂಲಕ ಕ್ಷೇತ್ರವನ್ನು ಐವತ್ತು ವರ್ಷ ಹಿಂದಕ್ಕೆ ಕೊಂಡೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.


ಆ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಎಪಿ ರಾಷ್ಟ್ರ ನಾಯಕರುಗಳು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಒಂದಾಗಿ ಕೆಲಸ ಮಾಡಲು ತೀರ್ಮಾನಿಸಲಾಗಿದೆ. ಭ್ರಷ್ಟಚಾರ ರಹಿತ, ಉತ್ತಮ ಆಡಳಿತಗಾರ ಜಯಪ್ರಕಾಶ್‌ಹೆಗ್ಡೆ ಅವರನ್ನು ಆಯ್ಕೆಗೊಳಿಸಿದರೆ ಜಾತಿಬೇಧವಿಲ್ಲದೇ ಸರ್ವಸಮಾನರಿಗೆ ಒಂದೇ ರೀತಿಯಲ್ಲಿ ಕೆಲಸ ಮಾಡುವವರೆಂದು ತಿಳಿಸಿದ್ದಾರೆ.


ಹೀಗಾಗಿ ಕಾಂಗ್ರೆಸ್ ಮತ್ತು ಎಎಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರುಗಳು ದಿಟ್ಟ ನಿರ್ಧಾರ ಕೈಗೊಂಡು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್‌ಹೆಗ್ಡೆ ಅವಕಾಶ ಮಾಡಿಕೊಟ್ಟಲ್ಲಿ ಎಂತಹ ಘಟಾನುಘಟಿಗಳು ಎದುರಾಗಿ ಪ್ರಚಾರ ಕೈಗೊಂಡಲ್ಲಿ ಪರಾಭವಗೊಳಿಸಲು ಅಸಾಧ್ಯ. ಹಾಗಾಗಿ ಈ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಜಯಪ್ರಕಾಶ್‌ಹೆಗ್ಡೆ ಆಯ್ಕೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!