ರಿಪ್ಪನ್‌ಪೇಟೆ ; 69ನೇ ಕನ್ನಡ ರಾಜ್ಯೋತ್ಸವ ಆಚರಣೆ

Written by Mahesha Hindlemane

Published on:

RIPPONPETE ; ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ಡಾ.ಪುನೀತ್‌ರಾಜ್ ಅಭಿಮಾನಿ ಬಳಗ ಇವರ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠ ಶಾಲಾ ಆವರಣದಲ್ಲಿ ಕನ್ನಡ ಧ್ವಜವನ್ನು ಧ್ವಜಾರೋಹನ ಮಾಡುವ ಮೂಲಕ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಧನಲಕ್ಷ್ಮಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಾತೃಭಾಷೆಯ ಕನ್ನಡವನ್ನು ಗೌರವಿಸುವ ಮೂಲಕ ಅದನ್ನು ಪ್ರೀತಿಸಿ ಪ್ರೋತ್ಸಾಹಿಸುವಂತಾಗ ಬೇಕು ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಯುವಜನಾಂಗ ಮುಂದಾಗಬೇಕು ಎಂದು ಕರೆ ನೀಡುವ ಮೂಲಕ ಭಾಷೆಯ ಬಗ್ಗೆ ಆವಹೇಳನ ನಡೆಸುವವರ ವಿರುದ್ಧ ನಾವು ಸಂಘಟನಾತ್ಮಕ ಹೋರಾಟಕ್ಕೆ ಸದಾ ಸಿದ್ದರಾಗಬೇಕು ಎಂದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಸ್ತೂರಿ ಸಂಘದ ಪ್ರಧಾನ ಕಾರ್ಯದರ್ಶಿ ನಿರ್ಮಲ, ಆರ್.ಎ.ಚಾಬುಸಾಬ್, ಜಿ.ಎಸ್.ವರದರಾಜ್, ನಗರಸಭೆಯ ನಿವೃತ್ತ ನೌಕರ ಹಭಿಬುಲ್ಲಾ ಷರೀಫ್ ಇನ್ನಿತರ ಹಲವರು ಹಾಜರಿದ್ದರು.

Leave a Comment