ರಿಪ್ಪನ್‌ಪೇಟೆ : 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಜೇಂದ್ರಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಧ್ವಜವಂದನೆ ಸಲ್ಲಿಸಿದರು.

ಧ್ವಜಾರೋಹಣಕ್ಕೂ ಮುನ್ನ ವಂದೇ ಮಾತರಂ ಗೀತೆ ಹಾಡಬೇಕು ಎಂಬ ನಿಯಮವಿದ್ದರೂ ಕೂಡಾ ಇಲ್ಲಿನ ನಾಡಕಛೇರಿಯಲ್ಲಿ ವಂದೇ ಮಾತರಂ ಗೀತೆ ಹಾಡದೆ ಅಗೌರವ ತೊರಿದ್ದಾರೆ ಅಲ್ಲದೆ ಗ್ರಾಮ ಪಂಚಾಯಿತ್ ಅಹವರಣದಲ್ಲಿ ಧ್ವಜಾರೋಹಣ ಮಾಡುವ ಮುನ್ನ ವಂದೇ ಮಾತರಂ ಗೀತೆಯನ್ನು ಅರ್ಧ ಹಾಡಿದಾಗ ಅಲ್ಲಿಯೇ ಇದ್ದ ಸಾರ್ವಜನಿಕ ಹಿರಿಯ ಮುಖಂಡ ಆರ್.ಟಿ ಗೋಪಾಲ ಆಕ್ಷೇಪಣೆ ವ್ಯಕ್ತಪಡಿಸಿ ಪೂರ್ಣ ಹಾಡುವಂತೆ ಕೇಳಿದಾಗ ನಮಗೆ ಯಾವುದೇ ಸರ್ಕಾರದ ಸುತ್ತೋಲೆ ಇಲ್ಲ ಎಂದು ಕೆಲವು ಸರ್ಕಾರಿ ನೌಕರರು ಹೇಳಿಕೊಳ್ಳಲು ಮುಂದಾದರು. ಆಗ ಮೊಬೈಲ್‌ನಲ್ಲಿ ವಂದೇ ಮಾತರಂ ಗೀತೆಯನ್ನು ನೋಡಿಕೊಂಡು ಹಾಡಿ ಪೂರ್ಣಗೊಳಿಸಿದರು.

ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ನಾಡಕಛೇರಿಯಲ್ಲಿ ಉಪತಹಸೀಲ್ದಾರ್ ಗೌತಮ್, ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿ.ಸಿ.ಎಂ ಹಿಂದುಳಿದ ವರ್ಗ ಇಲಾಖೆಯಲ್ಲಿ ಮೇಲ್ವಿಚಾರಕಿ ಸುಮಿತ್ರಭಾಯಿ, ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕಿ ಅಂಬಿಕಾ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಗುಡ್‌ಶಫರ್ಡ್ ಶಾಲೆಯಲ್ಲಿ ಫಾದರ್ ಬಿನೋಯ್, ಮೇರಿಮಾತಾ ಪ್ರೌಢಶಾಲೆಯಲ್ಲಿ ಸಿಸ್ಟರ್ ಫಾತಿಮಾ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಿ.ಡಿ.ಸಿ.ಉಪಾಧ್ಯಕ್ಷ ಜಿ.ಆರ್.ಗೋಪಾಲಕೃಷ್ಣ, ಸರ್ಕಾರಿ ಕೆ.ಪಿ.ಎಸ್.ಸಿ.ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಶಾಖಾ ವ್ಯವಸ್ಥಾಪಕ ಆರ್.ಪ್ರತಾಪ್, ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎನ್.ರಾಜು, ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ,
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಅಂಜನಪ್ಪ, ಶ್ರೀಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಚ್.ಎಂ.ವರ್ತೇಶ್‌ಗೌಡ ಹುಗುಡಿ, ಜಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹಮ್ಮದ್ ರಫಿ, ಜಂಬಳ್ಳಿ ಶ್ರೀ ಗಜಾನನ ಯುವಕ ಸಂಘದ ಅಧ್ಯಕ್ಷ ಜೆ.ಎಂ.ಶಾಂತ ಕುಮಾರ್, ಮೂಗುಡ್ತಿ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಮೋದ್, ಕೋಡೂರು ಗ್ರಾಮ ಪಂಚಾಯಿತ್ ಕಛೇರಿಯಲ್ಲಿ ಪಿಡಿಒ ಎಸ್. ನಾಗರಾಜ, ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ, ಹುಂಚ ಗ್ರಾಮ ಪಂಚಾಯಿತ ಪಿಡಿಒ ರಮೇಶ್, ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿತೀಶ್, ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿಗಳು ದ್ವಜಾರೋಹಣ ನೆರವೇರಿಸಿದರು.

ನಂತರ ಶಾಲಾ ಮಕ್ಕಳಿಂದ ಊರಿನ ಪ್ರಮುಖ ಬೀದಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಥಸಂಚಲನ ಸಾರ್ವಜನಿಕರ ಗಮನಸೆಳೆಯಿತು.

