ರೈತರ ಸಾಲಕ್ಕೆ ಬಡ್ಡಿ ರಿಯಾಯಿತಿ ಘೋಷಣೆ!

Written by Koushik G K

Published on:


Kisan Credit Card :ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಬಡ್ಡಿ ರಿಯಾಯಿತಿಯನ್ನು ಮುಂದುವರಿಸಿದ್ದು, ಬೆಂಬಲ ಬೆಲೆ ಹಾಗೂ ಬಡ್ಡಿ ರಹಿತ ಸಾಲದ ನಿರ್ಧಾರದಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಇಂಟರೆಸ್ಟ್ ಅನ್ನು ಸಮಯಕ್ಕೆ ಸಾಲ ಪಾವತಿ ಮಾಡುತ್ತಿರುವ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅವರುಗಳಿಗೆ ಕೇಂದ್ರ ಸರ್ಕಾರ ಶೇ 3ರಷ್ಟು ಬಡ್ಡಿ ವಿನಾಯಿತಿಯನ್ನು ನೀಡಲಿದ್ದು, ಇದರಿಂದ ಒಟ್ಟಾರೆ ಬಡ್ಡಿದರ ಕೇವಲ ಶೇ 4 ರಷ್ಟು ಆಗಲಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರೈತರ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆ ಹೊತ್ತಿರುವ ರೈತರಿಗೆ ಮತ್ತೊಂದು ಭದ್ರತೆ ನೀಡುತ್ತಿದೆ ಅಂದರೆ ಖಾರಿಫ್ ಬೆಳೆಗಳಿಗೆ ಬೆಂಬಲೆ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳವಾಗಲಿದೆ. ರಾಗಿಗೆ ರೂ 596ರಷ್ಟು, ತೊಗರಿ ಬೆಳೆಗೆ ರೂ 450,ಉದ್ದಿನ ಬೆಳೆಗೆ ರೂ 400 ಮತ್ತು ಭತ್ತಕ್ಕೆ ರೂ 65ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ.

ಈ ಮೂಲಕ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. 7.57 ಕೋಟಿರಷ್ಟು ಜನರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದಿದ್ದು ಬಡ್ಡಿ ರಿಯಾಯಿತಿಯ ಲಾಭವನ್ನು ಕೂಡ ಪಡೆಯಲಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ 2 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ. ರೈತರಿಗೆ ಅಲ್ಪಾವಧಿ ಸಾಲದ ಮೇಲಿನ ಶೇ 7ರಷ್ಟು ಬಡ್ಡಿದರದಿಂದ ರೈತರಿಗೆ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರದ ಈ ನಿಲುವುಗಳಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗಿ ಕೃಷಿ ಆಧಾರಿತ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಲಿದೆ.

Read More

ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ

Leave a Comment