ಸರ್ಕಾರಿ ನೌಕರರೇ ಇದನ್ನ ಗಮನಿಸಿ: ಆರೋಗ್ಯ ಸಂಜೀವಿನಿ ಯೋಜನೆಗೆ ಈ ದಾಖಲೆಗಳು ಕಡ್ಡಾಯ!

Written by Koushik G K

Published on:

Arogya Sanjeevini :ಸರ್ಕಾರಿ ನೌಕರರ ಕುಟುಂಬಕ್ಕೂ ಉಚಿತ ಆರೋಗ್ಯ ವಿಮಾ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಗೆ ಆರೋಗ್ಯ ಸಂಜೀವಿನಿ ಎನ್ನುವ ಹೆಸರನ್ನು ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರಿ ನೌಕರರ ಕುಟುಂಬದ ಸದಸ್ಯರ ನೋಂದಣಿಯು ಕಡ್ಡಾಯವಾಗಿದ್ದು, ಯಾವೆಲ್ಲಾ ದಾಖಲೆಗಳ ಅಗತ್ಯ ಇದೆ ಎನ್ನುವುದಕ್ಕೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

WhatsApp Group Join Now
Telegram Group Join Now
Instagram Group Join Now

ಕರ್ನಾಟಕ ರಾಜ್ಯ ಸರ್ಕಾರದ ಈ ಆರೋಗ್ಯ ಸಂಜೀವಿನಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಹ ಸರ್ಕಾರಿ ನೌಕರರು ಒಂದಷ್ಟು ದಾಖಲೆಗಳನ್ನು ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಿದೆ. ಸರ್ಕಾರಿ ನೌಕರನ ಪತ್ನಿ ಅಥವಾ ಪತ್ನಿಯ ಉದ್ಯೋಗದ ವಿವರ, ತಂದೆಯ ವಿವರ, ತಾಯಿ, ಮಲ ತಾಯಿ, ಮಕ್ಕಳ ಮಾಹಿತಿಯನ್ನು ನಮೂದಿಸಬೇಕು.

ಕಡ್ಡಾಯವಾಗಿರುವ ದಾಖಲೆಗಳು ಈ ರೀತಿ ಇವೆ.

ಸರ್ಕಾರಿ ನೌಕಕರು ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವುದಕ್ಕೆ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಈ ಕೆಳಗೆ ತಿಳಿಸಲಾಗಿರುವ ದಾಖಲೆಗಳನ್ನು ನೀಡಬೇಕಾಗಿದೆ.

ಸರ್ಕಾರಿ ನೌಕರನ ಹಾಗೂ ಆತನ ಕುಟುಂಬದ ಅರ್ಹ ಸದಸ್ಯರ ಭಾವಚಿತ್ರ ಕಡ್ಡಾಯವಾಗಿದೆ. ಅಂದರೆ ಅರ್ಹರಾದ ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ ಸೇರಿಸಬೇಕು. ಅಲ್ಲದೇ ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಭಾವಚಿತ್ರವನ್ನು ಸಲ್ಲಿಸಬೇಕು.‌

ಎಲ್ಲರ ಸರಿಯಾದ ಜನ್ಮ ದಿನಾಂಕ ದಾಖಲೆಗಳು

ಎಲ್ಲರ ಆಧಾರ್ ಕಾರ್ಡ್ ಗಳು

ಅರ್ಹ ಸದಸ್ಯರ ವೇತನ ಚೀಟಿಗಳು

ಕಾನೂನು ದಾಖಲೆಗಳು ಅಂದರೆ ದತ್ತು ಪಡೆದಿರುವುದು, ವಿವಾಹ ಇನ್ನಿತರೆ ದಾಖಲೆಗಳಾಗಿರುತ್ತದೆ.

Read More

ಆಸ್ತಿ ಮತ್ತು ಭೂಮಿ ನೊಂದಣಿಯಲ್ಲಿ ಹೊಸ ನಿಯಮ ಜಾರಿಗೆ!

ಈ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಏರಿಕೆ: ಮಹತ್ವದ ನಿರ್ಣಯ ಮಾಡಿದ ಕೇಂದ್ರ ಸಂಪುಟ!

ಸುಲಭವಾಗಿ ಇ-ಸ್ವತ್ತು ದಾಖಲೆಯನ್ನು ನಿಮ್ಮ ಮೊಬೈಲ್ನಲ್ಲೇ ಉಚಿತವಾಗಿ ಪಡೆಯಬಹುದು.

Leave a Comment