ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕ್ರೆಡಿಟ್ ಯಡಿಯೂರಪ್ಪನವರಿಗೆ ಸಿಕ್ಕಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

Written by Koushik G K

Published on:

ಸಾಗರ :ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುದಾನ ಬಳಸಲಾಗಿದೆ. ನಮ್ಮ ರಾಜ್ಯದ ತೆರಿಗೆದಾರರ ಹಣವೇ ಇದಕ್ಕೆ ಖರ್ಚಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರನ ಮನೆಯ ಹಣದಿಂದ ಸೇತುವೆ ಮಾಡಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೇತುವೆ ನಿರ್ಮಾಣದ ಕ್ರೆಡಿಟ್ ಸಂಪೂರ್ಣವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಬೇಕು. ನಾನು ಮೊದಲೇ ಈ ಸೇತುವೆಗಾಗಿ ಮನವಿ ಮಾಡಿದ್ದೆ. ಯಡಿಯೂರಪ್ಪನವರು ಯೋಜನೆ ಮಂಜೂರು ಮಾಡುವ ಭರವಸೆ ನೀಡಿದ್ದರು. ನಂತರ ಸಂಸದರಾದ ರಾಘವೇಂದ್ರ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಳಿ ಒತ್ತಡ ತಂದು ಅನುಮೋದನೆ ತರಿಸಿದರು. ಆದರೆ ಈಗ ರಾಘವೇಂದ್ರ ಅವರು ವಾರಕ್ಕೊಮ್ಮೆ ಬಂದು ‘ನಾನು ಸೇತುವೆ ಮಾಡಿಸಿದ್ದೇನೆ’ ಎಂಬಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸೇತುವೆ ಲೋಕಾರ್ಪಣೆಗೆ ಪ್ರಧಾನಿಯನ್ನಾಗಲೀ, ಗಡ್ಕರಿಯನ್ನಾಗಲೀ ಕೊನೆಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನೆ ಕರೆಸಲಿ. ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತೇನೆ. ನನ್ನ ಗಮನಕ್ಕೆ ತರದೇ ಸೇತುವೆ ಲೋಕಾರ್ಪಣೆಗಾಗಿ ಸ್ಥಳ ಗುರುತಿಸುವುದು ಇನ್ನಿತರೆ ಚಟುವಟಿಕೆ ನಡೆಸಿದರೆ ಸಹಿಸಿವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.

“ಟೆಂಟ್ ಹಾಕಿಕೊಂಡು ಶೋ ಮಾಡಲಿ “

ತುಮರಿ ಸೇತುವೆ ಪಕ್ಕದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಟೆಂಟ್ ಹಾಕಿಕೊಂಡು, “ಸೇತುವೆ ನಾವು ಮಾಡಿಸಿದ್ದೇವೆ” ಎಂದು ಬಂದವರಿಗೆಲ್ಲಾ ಪ್ರಚಾರ ಮಾಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.

Read More :ಸಿಗಂದೂರು ಸೇತುವೆ : ದೇಶದ 2ನೇ ಉದ್ದದ ಕೇಬಲ್ ಬ್ರಿಡ್ಜ್‌ ಉದ್ಘಾಟನೆಗೆ ಕ್ಷಣಗಣನೆ

Leave a Comment