ಮಲೆನಾಡಿನಲ್ಲಿ ಮುಂದುವರೆದ ಭಾರಿ ವರ್ಷಧಾರೆ ; ಹೊಸನಗರದ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು !

Written by Mahesha Hindlemane

Published on:

ಶಿವಮೊಗ್ಗ : ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಇಂದು ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು (ಸಂಪೆಕಟ್ಟೆ) ಯಲ್ಲಿ ರಾಜ್ಯದಲ್ಲೇ ಅತ್ಯಧಿಕ 381 ಮಿ.ಮೀ. ಮಳೆ ದಾಖಲಾಗಿದೆ.

ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ? (ಮಿ.ಮೀ.ಗಳಲ್ಲಿ) :

  • ಹುಲಿಕಲ್ – ಹೊಸನಗರ : 270
  • ಯಡೂರು – ಹೊಸನಗರ : 234
  • ಮಾಸ್ತಿಕಟ್ಟೆ – ಹೊಸನಗರ : 217
  • ಮಾಣಿ – ಹೊಸನಗರ 207
  • ಸುಳಗೋಡು – ಹೊಸನಗರ : 204
  • ತೀರ್ಥಮತ್ತೂರು – ತೀರ್ಥಹಳ್ಳಿ : 169.5
  • ಹೊಸಳ್ಳಿ – ತೀರ್ಥಹಳ್ಳಿ : 165.5
  • ಮೇಗರವಳ್ಳಿ – ತೀರ್ಥಹಳ್ಳಿ : 165
  • ಹೊನ್ನೆತಾಳು – ತೀರ್ಥಹಳ್ಳಿ : 160
  • ಸಾವೇಹಕ್ಲು ಹೊಸನಗರ : 159
  • ಆರಗ – ತೀರ್ಥಹಳ್ಳಿ : 152
  • ನೆರಟೂರು – ತೀರ್ಥಹಳ್ಳಿ : 143
  • ಅರೇಹಳ್ಳಿ – ತೀರ್ಥಹಳ್ಳಿ : 134.5
  • ಬಿದನೂರುನಗರ – ಹೊಸನಗರ : 134
  • ಸಾಲ್ಗಡಿ – ತೀರ್ಥಹಳ್ಳಿ : 130
  • ಚಕ್ರಾನಗರ – ಹೊಸನಗರ : 120
  • ಬೆಜ್ಜವಳ್ಳಿ – ತೀರ್ಥಹಳ್ಳಿ : 109
  • ಲಿಂಗನಮಕ್ಕಿ – ಸಾಗರ : 83
  • ಹೊಸನಗರ – ಹೊಸನಗರ : 75.4

ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಗ್ಗೆ 8:00 ಗಂಟೆಗೆ 1787.80 ಅಡಿ ತಲುಪಿದ್ದ ಕಳೆದ ವರ್ಷ ಇದೇ ಅವಧಿಗೆ 1754.95 ಅಡಿ ನೀರಿನ ಸಂಗ್ರಹವಾಗಿತ್ತು. ಜಲಾಶಯಕ್ಕೆ 45070 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Leave a Comment