ರಿಪ್ಪನ್‌ಪೇಟೆ ; ಅಮೇರಿಕಾ ದೇಶದ ಚಿಕಾಗೋನಲ್ಲಿ ಏರ್ಪಡಿಸಿರುವ ವಿಶ್ವ ಜೈನಧರ್ಮ ಸಮ್ಮೇಳನದಲ್ಲಿ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ತೆರಳಿದ್ದಾರೆ.

ಜುಲೈ 3 ರಿಂದ 6ರವರೆಗೆ ನಡೆಯಲಿರುವ ಧರ್ಮಸಭೆಯಲ್ಲಿ ಜೈನ ಧರ್ಮ ಸಿದ್ಧಾಂತ, ವಿಶ್ವ ಧರ್ಮ ಸಮನ್ವಯತೆ, ವಿಶ್ವ ಶಾಂತಿ, ಸ್ವಚ್ಛ ಪರಿಸರ ರಕ್ಷಣೆ ಕುರಿತು ವಿಶೇಷ ಪ್ರವಚನ ನೀಡಲಿದ್ದಾರೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಥಮ ಬಾರಿಗೆ ಪೂಜ್ಯಸ್ವಸ್ತಿಶ್ರೀ ಸ್ವಾಮೀಜಿಯವರು ಚಿಕಾಗೋದಲ್ಲಿ ಜೈನ ಧರ್ಮದ ಸಾರಸತ್ವದ ಮಹತ್ವವನ್ನು ಸಾದರಪಡಿಸಲಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.