CA ಅಂತಿಮ ಪರೀಕ್ಷೆಯಲ್ಲಿ ಪ್ರಜ್ವಲ್ ಹೆಚ್.ವಿ ತೇರ್ಗಡೆ: ಅಭಿನಂದನೆ

Written by Koushik G K

Updated on:

ಹುಂಚ – ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಂಚ ನಿವಾಸಿ ವಿಶ್ವಸೇನಾ ಇಂದ್ರ ಅವರ ಪುತ್ರ ಪ್ರಜ್ವಲ್ ಹೆಚ್.ವಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ (ICAI) ನಡೆಸಿದ ಮೇ 2025ರ ಅಂತಿಮ ಹಂತದ CA ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಜ್ವಲ್ ಅವರ ಈ ಸಾಧನೆ, ಕುಟುಂಬಕ್ಕೆ ಮಾತ್ರವಲ್ಲದೆ ಗ್ರಾಮಸ್ಥರಿಗು ಕೂಡ ಹೆಮ್ಮೆ ತರಿಸಿದೆ. ತನ್ನ ಪರಿಶ್ರಮದಿಂದ ಈ ಮಟ್ಟವನ್ನು ಮುಟ್ಟಿದ ಪ್ರಜ್ವಲ್, ಇತರ ಯುವಕರಿಗೂ ಪ್ರೇರಣೆಯ ಆದರ್ಶವಾಗಿದ್ದಾರೆ.

ಈ ಕುರಿತು ಸಂತೋಷ ವ್ಯಕ್ತಪಡಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಾ ದೇವರಾಜ್, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ದೇವೇಂದ್ರ ಹುಂಚ, ಆಶಾ, ಯದುಕುಮಾರ್, ರಾಘವೇಂದ್ರ ತೋಟದಕಟ್ಟು ಮತ್ತು ಪಂಚಾಯತಿ ಸಿಬ್ಬಂದಿ ಮನೆಗೆ ತೆರಳಿ ಅವರನ್ನು ಅಭಿನಂದಿಸಿದ್ದಾರೆ.

Read more :ಪದವಿಪೂರ್ವ ಕಾಲೇಜಿನ ಟ್ರೆಸ್ ಅಳವಡಿಕೆ – ಅವೈಜ್ಞಾನಿಕ ಕಾಮಗಾರಿ : ತಕ್ಷಣ ಕಾಮಗಾರಿ ತಡೆಗೆ ಹಿಡಿಯಲು ಸಾರ್ವಜನಿಕರ ಆಗ್ರಹ

Leave a Comment