ಬಿಜೆಪಿಯವರು ಸಂವಿಧಾನ ಒಪ್ಪಿಕೊಂಡರೆ RSS ಅನ್ನು ತಿರಸ್ಕರಿಸಲಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್

Written by Koushik G K

Published on:

ಶಿವಮೊಗ್ಗ: “ಬಿಜೆಪಿಯವರು ಭಾರತೀಯ ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಅಥವಾ ಆರ್.ಎಸ್.ಎಸ್. ಪ್ರತಿರೂಪವಾದ ಚಿಂತನಾ ಗಂಗಾ ಮತ್ತು ಕೃತಿ ಸಂಘ ರೂಪದರ್ಶನವನ್ನು ಎರಡರಲ್ಲಿ ಒಂದು ಆಯ್ಕೆ ಮಾಡಬೇಕು, ಈ ಎರಡೂ ಒಂದೇ ಬಾರಿಗೆ ಇರಲು ಸಾಧ್ಯವಿಲ್ಲ,” ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದ್ವಂದ್ವ ನಿಲುವು ತಾಳುತ್ತಿರುವ ಬಿಜೆಪಿ

“ಬಿಜೆಪಿ ಸಂವಿಧಾನವನ್ನು ಸ್ವೀಕರಿಸುತ್ತಿದ್ದರೆ ಆರ್.ಎಸ್.ಎಸ್. ನಿಂದ ದೂರ ಉಳಿಯಬೇಕು. ಅಥವಾ ಆರ್.ಎಸ್.ಎಸ್. ನ ಚಿಂತನೆಗಳನ್ನು ಅಳವಡಿಸಿಕೊಳ್ಳುವುದಾದರೆ ಸಂವಿಧಾನವನ್ನು ತಿರಸ್ಕರಿಸಬೇಕು. ಆದರೆ ಈಗಿನ ಬಿಜೆಪಿ ನೇತೃತ್ವ ದ್ವಂದ್ವ ನಿಲುವು ತಾಳುತ್ತಿದೆ” ಎಂದು ಕಿಮ್ಮನೆ ಟೀಕಿಸಿದರು.

ಅವರು ಮುಂದುವರೆದು, “ಬಿಜೆಪಿ ಜಾತ್ಯತೀತತೆಯನ್ನು ವಿರೋಧಿಸುತ್ತಿದೆ, ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು” ಎಂದರು.

ಕಾಂಗ್ರೆಸ್‌ನ ಬಹುಜಾತಿ, ಬಹುಧರ್ಮ ನಿಲುವು

“ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮದವರನ್ನು ಒಳಗೊಂಡ ಬಹುತ್ವದ ಭಾರತವನ್ನು ನಿರ್ಮಿಸಲು ಬದ್ಧವಾಗಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕಿ ಸಹಬಾಳ್ವೆಯ ವಾತಾವರಣ ಮೂಡಿಸುವುದು ಪಕ್ಷದ ಆದರ್ಶವಾಗಿದೆ” ಎಂದು ಅವರು ತಿಳಿಸಿದರು.

ಭಾಷಾ ರಾಜಕೀಯ ಮತ್ತು ಧ್ವಜ ವಿವಾದ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಉದ್ದೇಶ ಮತ್ತು ನೀತಿ ಕುರಿತು ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ಮಾಡಿದರು: “ಈ ಸರ್ಕಾರ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತಿದ್ದು, ಬಡವರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಈ ನೀತಿಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ” ಎಂದು ಹೇಳಿದರು.

ಬಡವರ ವಿರುದ್ಧ ನೀತಿ: ಕಿಮ್ಮನೆ ಆರೋಪ

“ದ್ವಿಭಾಷಾ ಸೂತ್ರವನ್ನು ಸಹ ಸ್ವತಃ ಕುವೆಂಪು ಒಪ್ಪಿಕೊಂಡಿದ್ದರು. ಆದರೆ ದೇಶದ ಒಕ್ಕೂಟ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಿಂದಿಯನ್ನು ಮಾತ್ರ ರಾಷ್ಟ್ರ ಭಾಷೆಯಾಗಿ ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಚಿಂತನ ಗಂಗಾ ಕೃತಿಯಲ್ಲಿ ರಾಷ್ಟ್ರೀಯ ಧ್ವಜವನ್ನೂ ಬದಲಾಗಿಸಿ ಭಗವಾಧ್ವಜವನ್ನು ಮುಂದಿಟ್ಟಿರುವುದು ಅತ್ಯಂತ ಆತಂಕಕಾರಿ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಪ್ರಮುಖರಾದ ರಮೇಶ್ ಹೆಗ್ಡೆ, ಶಿವಾನಂದ್, ಕಲಗೋಡು ರತ್ನಾಕರ್ ಮೊದಲಾದವರು ಇದ್ದರು

Leave a Comment